ಮೈಸೂರು: ರಿಜಿಸ್ಟರ್ ಫೈನಾನ್ಸ್ಗಳು ಆರ್‌ಬಿಐ ಗೈಡ್‌ಲೈನ್‌ಗೆ ಒಳಪಡುತ್ತದೆ. ರಾಜ್ಯ ಸರ್ಕಾರ ಗಮನಿಸಿ ಸೂಕ್ತ ನಿಯಮ ಜಾರಿಗೆ ತರಬೇಕು ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ.
ಕಾನೂನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಪೊಲೀಸರಿಗೆ ಅಧಿಕಾರ ಕೊಟ್ಟು ಅದರಲ್ಲಿ ಭ್ರಷ್ಟಾಚಾರ ಆಗಬಾರದು. ಸಮಿತಿಗೆ ಪ್ರಾಮಾಣಿಕ ಅಧಿಕಾರಿಗಳನ್ನ ನೇಮಿಸಿ ಮಾನಿಟರ್ ಮಾಡಬೇಕು. ಗೈಡ್‌ಲೈನ್‌ನಲ್ಲಿ ಎಷ್ಟು ಪರ್ಸಟೇಂಜ್ ಬಡ್ಡಿ ಹಾಕಬೇಕೆಂಬುದು ಇದೆ. ಅನ್‌ರಿಜಿಸ್ಟರ್ ಮೈಕ್ರೋ ಫೈನಾನ್ಸ್ಗಳು ಸಾಕಷ್ಟು ಇದೆ.
ಎನ್‌ಬಿಎಫ್‌ಸಿಯಲ್ಲೂ ಸಹ ಇದಕ್ಕೆ ಪವರ್ ಸಿಗ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಕಂಟ್ರೋಲ್ ಮಾಡಬೇಕು. ಇದರಲ್ಲಿ ಭ್ರಷ್ಟಾಚಾರ ಆಗ್ತಿದೆ, ಫೈನಾನ್ಸ್ ಕಂಪನಿಗಳು ಪೊಲೀಸರ ರಕ್ಷಣೆ ಪಡೆದು ಸಾಲಗಾರರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರ ಮೇಲೆ ನಾನು ಯಾವುದೇ ಆರೋಪ ಮಾಡುವುದಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಪ್ರಕರಣಗಳು ಹೆಚ್ಚಾಗಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ರಾಜ್ಯದಲ್ಲಿ ಏನೇ ನಡೆದರು ಬಿಜೆಪಿ, ಕೇಂದ್ರ ಸರ್ಕಾರದ ಮೇಲೆ ಹಾಕುತ್ತಾರೆ. ಮಳೆ ಹೆಚ್ಚಾದರು ಕಡಿಮೆಯಾದ್ರು ಕೇಂದ್ರ, ರಾಜ್ಯದ ಬಿಜೆಪಿ ಕಾರಣ ಅಂತಾರೆ, ಈ ಬಾಲಿಷ ಹೇಳಿಕೆಗಳನ್ನ ಕೊಡುವುದನ್ನ ರಾಜ್ಯ ಸರ್ಕಾರ ಬಿಡಬೇಕು . ಜನರು ಅಧಿಕಾರ ಕೊಟ್ಟಿದ್ದಾರೆ ಒಳ್ಳೆಯ ಕೆಲಸಗಳನ್ನ ಮಾಡಲಿ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಸಿಎಂ-ಡಿಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದರು.
ಮುಡಾದಿಂದ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಕೇಸ್ ವಿಚಾರವಾಗಿ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದರು. ರಾಜ್ಯಪಾಲರ ಆದೇಶದ ವಿರುದ್ಧವಾಗಿ ಹೈಕೋರ್ಟ್ಗೆ ಹೋದರು. ಆದರೆ ರಾಜ್ಯಪಾಲರ ನಡೆಯನ್ನ ಹೈಕೋರ್ಟ್ ತೆಗೆದು ಹಾಕಿಲ್ಲ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನಿಯಮಗಳನ್ನ ಉಲ್ಲಂಘಿಸಿದ್ದಾರೆAದು ರಾಜ್ಯದ ಉಚ್ಚನ್ಯಾಯಾಲಯ ಹೇಳಿದೆ. ಆದರೂ ಸಿಎಂ ಆಗಿ ಮುಂದುವರೆದಿರುವುದೇ ಒಂದು ಅನೈತಿಕತೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದರು.