ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಸಂಸ್ಕೃತಿ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ರೇವ್ ಪಾರ್ಟಿ ನಡೆಸಲಾಗಿದ್ದು 50ಕ್ಕೂ ಹೆಚ್ಚು ಯುವಕ- ಯುವತಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅರಮನೆ ನಗರಿ ಮೈಸೂರಿಗೂ ರೇವ್ ಪಾರ್ಟಿ ಕಾಲಿಟ್ಟಿದ್ದು ಪ್ರಖ್ಯಾತ ನಾಡಹಬ್ಬ ದಸರಾ ವೇಳೆಯೇ ಪಾರ್ಟಿ ನಡೆಸಲಾಗುತ್ತಿತ್ತು. ನಗರದ ಹೊರವಲಯದಲ್ಲಿ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ಫಸ್ಟ್ ಖಚಿತ ಮಾಹಿತಿ ಕಲೆ ಹಾಕಿ ಪೊಲೀಸರಿಗೆ ತಿಳಿಸಿತ್ತು. ಕೂಡಲೇ ಪೊಲೀಸರು ತಡರಾತ್ರಿ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸುಮಾರು 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಕೆಲವು ಯುವಕರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ.ಆದರೂ ಪೊಲೀಸರು ತಮ್ಮ ಪಟ್ಟು ಸಡಿಲಿಸದೇ ಅರೆಸ್ಟ್ ಮಾಡಿದ್ದಾರೆ.
Ad