ಮೈಸೂರು: ನಿವೇಶನಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸಲಾಯಿತು. ಕೊರೆವ ಚಳಿಯಲ್ಲೇ ನಿವೇಶನ ರಹಿತರು ರಾತ್ರಿ ಕಳೆದರು. ಟಿ ನರಸೀಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಯಿತು.
ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಧಿಸುವ ಕ್ಷೇತ್ರವಾಗಿದ್ದು, ಹಲವು ವರ್ಷಗಳಿಂದ ನಿವೇಶನವಿಲ್ಲದೆ ಗುಡಿಸಲಿನಲ್ಲಿ ಕೊರಚ ಸಮುದಾಯ ವಾಸ ಮಾಡುತ್ತಿದ್ದರು. ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಬದುಕು ಮುರಾ ಬಟ್ಟೆಯಾಗಿದೆ. ನಿವೇಶನ ನೀಡುವವರೆಗೆ ಪ್ರತಿಭಟನೆ ಮುಂದುವರೆಸಲು ಪ್ರತಿಭಟನಕಾರರ ನಿರ್ಧಾರಿಸಿದ್ದಾರೆ.