Bengaluru 22°C
Ad

ಆರೋಗ್ಯಕರ ಬಾಲ್ಯವನ್ನು ಉತ್ತೇಜಿಸುವುದು ಮಕ್ಕಳ ಹಕ್ಕು: ಡಾ.ಕೆ.ರಂಗರಾಜು

ಸುರಕ್ಷಿತ ಮತ್ತು ಆರೋಗ್ಯಕರ ಬಾಲ್ಯವನ್ನು ಉತ್ತೇಜಿಸುವುದು, ಮಕ್ಕಳ ಹಕ್ಕುಗಳನ್ನು ಗುರುತಿಸಿ ಅದನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮದಾಗಿದೆ ಎಂದು ಸಮರ್ಥನಂ ಸಂಸ್ಥೆಯ ಹಿತೈಷಿ ಡಾ.ಕೆ.ರಂಗರಾಜು (ಮುರಳಿ) ತಿಳಿಸಿದರು.

ಮೈಸೂರು: ಸುರಕ್ಷಿತ ಮತ್ತು ಆರೋಗ್ಯಕರ ಬಾಲ್ಯವನ್ನು ಉತ್ತೇಜಿಸುವುದು, ಮಕ್ಕಳ ಹಕ್ಕುಗಳನ್ನು ಗುರುತಿಸಿ ಅದನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮದಾಗಿದೆ ಎಂದು ಸಮರ್ಥನಂ ಸಂಸ್ಥೆಯ ಹಿತೈಷಿ ಡಾ.ಕೆ.ರಂಗರಾಜು (ಮುರಳಿ) ತಿಳಿಸಿದರು.

Ad

ಮೈಸೂರು ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿ ನಡೆದ ಮಕ್ಕಳ ದಿನಾಚರಣೆಯ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ, ಪೋಷಣೆ ಮತ್ತು ಸುರಕ್ಷಿತ ಮನೆಯ ವಾತಾವರಣದಂತಹ ವಿಧಾನಗಳ ಮೂಲಕ ಮಕ್ಕಳ ಒಟ್ಟಾರೆ ಯೋಗಕ್ಷೇಮವನ್ನು ಖಚಿತಪಡಿಸಿ, ವಿಶ್ವದ ಭವಿಷ್ಯದ ನಾಯಕರನ್ನು ರಕ್ಷಿಸುವ ಮತ್ತು ಪೋಷಿಸುವ ಜವಾಬ್ದಾರಿಯನ್ನು ಸಮಾಜ ತೆಗೆದುಕೊಳ್ಳುವಂತೆ ಮಾಡುವುದೇ ಮಕ್ಕಳ ದಿನಾಚರಣೆಯ ಆಶಯವಾಗಿದೆ ಎಂದು ತಿಳಿಸಿದರು.

Ad

ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗೀಯ ಸಂಯೋಜಕ ಶಿವರಾಜು ಮಾತನಾಡಿ, ಭಾರತದಲ್ಲಿ ಮಕ್ಕಳ ದಿನವು ಪಂಡಿತ್ ಜವಾಹರಲಾಲ್ ನೆಹರು ಅವರ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಆಚರಣೆಯಾಗಿದ್ದು, ಮಕ್ಕಳ ಕಲ್ಯಾಣ ಮತ್ತು ಶಿಕ್ಷಣದ ಮೇಲೆ ಅವರ ಪ್ರಭಾವವನ್ನು ಗುರುತಿಸುತ್ತದೆ. ಈ ವಾರ್ಷಿಕ ಆಚರಣೆಯು ಜಾಗೃತಿ ಮೂಡಿಸಲು, ಕ್ರಿಯೆಯನ್ನು ಪ್ರೇರೇಪಿಸಲು ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಯುವ ಮನಸ್ಸುಗಳಿಗೆ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಸಾಮೂಹಿಕ ಬದ್ಧತೆಯನ್ನು ಉತ್ತೇಜಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

Ad

ಇದೇ ಸಂದರ್ಭದಲ್ಲಿ ಬುದ್ಧಿ ವಿಶೇಷ ಚೇತನ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಬುದ್ಧಿ ವಿಕಲಚೇತನ ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಭ, ಮಂತೇಶ್, ಚೈತ್ರಕುಮಾರಿ ವಿಶೇಷ ಶಿಕ್ಷಕರಾದ ಪಿ.ಪದ್ಮ, ಬೃಂದಾ ಬಾಯಿ, ವಿದ್ಯಾವತಿ, ಸಿಬ್ಬಂದಿ ಮಹದೇವು, ಮಂಜುಳಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Ad
Ad
Ad
Nk Channel Final 21 09 2023