Bengaluru 23°C

ಮೈಸೂರು: ನಕಲಿ ನೋಟು‌ ಮುದ್ರಿಸಿ ಚಲಾವಣೆ: ಆರೋಪಿಗಳ ಬಂಧನ

ನಕಲಿ ನೋಟು ಮುದ್ರಣ ಮಾಡುತ್ತಿದ್ದ ಅಪ್ಪ ಮಗ ಬಂಧಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಟಿ ನರಸೀಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರು: ನಕಲಿ ನೋಟು ಮುದ್ರಣ ಮಾಡುತ್ತಿದ್ದ ಅಪ್ಪ ಮಗ ಬಂಧಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಟಿ ನರಸೀಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.


ನಾಗೇಶ್ 27 ಪ್ರಸಾದ್ 53 ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಟಿ ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದ ನಿವಾಸಿಗಳು ಈ ಕೃತ್ಯ ಎಸಗಿದ್ದಾರೆ.


ಬಂಧಿತ ಆರೋಪಿಗಳಿಂದ ಸುಮಾರು 25 ಸಾವಿರ ಮೌಲ್ಯದ ನಕಲಿ ನೋಟು ಒಂದು ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಮ್ಮದೇ ಜಮೀನಿನ ಶೆಡ್ ನಲ್ಲಿ ತಂದೆ ಮಗ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದರು. ಇಸ್ಪೀಟ್ ಆಟ ಆಡುವಾಗ ಹೆಚ್ಚಾಗಿ ನಕಲಿ ನೋಟು ಬಳಕೆಯಾಗುತ್ತಿತ್ತು. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Nk Channel Final 21 09 2023