Bengaluru 28°C

ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕದಿಂದ ಸುದ್ದಿಗೋಷ್ಠಿ!

ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕದಿಂದ ಸುದ್ದಿಗೋಷ್ಠಿ ನಡೆಸಿದರು. ಮುಡಾ ಪ್ರಕರಣ ಇತ್ತೀಚಿನ ದಿನಗಳಲ್ಲಿ ಜನರಿಗೆ ತಿಳಿದಿದೆ. ಸಿಎಂ ಸಿದ್ದರಾಮಯ್ಯನವರ ಪತ್ನಿ ಪಡೆದ 14 ನಿವೇಶನ ವಾಪಸ್ ನೀಡಿದ್ದಾರೆ.

ಮೈಸೂರು : ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕದಿಂದ ಸುದ್ದಿಗೋಷ್ಠಿ ನಡೆಸಿದರು. ಮುಡಾ ಪ್ರಕರಣ ಇತ್ತೀಚಿನ ದಿನಗಳಲ್ಲಿ ಜನರಿಗೆ ತಿಳಿದಿದೆ. ಸಿಎಂ ಸಿದ್ದರಾಮಯ್ಯನವರ ಪತ್ನಿ ಪಡೆದ 14 ನಿವೇಶನ ವಾಪಸ್ ನೀಡಿದ್ದಾರೆ.


ಇದಾದ ಬಳಿಕ ಅಕ್ರಮವಾಗಿ ನೀಡಲಾದ 48 ಸೈಟ್ ಗಳನ್ನ ಸರ್ಕಾರ ರದ್ದು ಮಾಡಿದೆ. ಇದನ್ನ ನಾವು ಕೂಡ ಸ್ವಾಗತ ಮಾಡುತ್ತೇವೆ. ಇದರ ಬಗ್ಗೆ ನಮ್ಮ ಕಾಂಗ್ರೆಸ್ ಶಾಸಕರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.


ಮುಡಾ ಹಗರಣದಲ್ಲಿ ಆಯುಕ್ತರ ಪಾತ್ರ ದೊಡ್ಡದಿದೆ. ಈಗಿದ್ರು ಕೂಡ ಆಯುಕ್ತರ ಮೇಲೆ ಕ್ರಮ ಕೈಗೊಂಡಿಲ್ಲ. ಮುಡಾ ಮಾಜಿ ಆಯುಕ್ತನ್ನ ಸಚಿವ ಭೈರತಿ ಸುರೇಶ್ ರಕ್ಷಣೆ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಚಿವ ಭೈರತಿ ಸುರೇಶ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಗಂಭೀರ ಆರೋಪ ಮಾಡಿದರು.


ಮುಡಾ ಹಗರಣವನ್ನ ಇಡಿ ತನಿಖೆ ಮಾಡಿದೆ. ಮುಡಾದಲ್ಲಿ 928 ಸೈಟ್ ಅಕ್ರಮವಾಗಿದೆ ಎಂಬ ವರದಿಯನ್ನ ಕೂಡ ನೀಡಿದೆ. ಕೂಡಲೇ ರಾಜ್ಯ ಸರ್ಕಾರ ಈ 928 ಸೈಟ್ ಗಳನ್ನ ರದ್ದು ಮಾಡಬೇಕು. ಸಿದ್ದರಾಮಯ್ಯನವರದ್ದು 14 ಸೈಟ್ ಮಾತ್ರ. ಆದರೆ ಇತರರಿಗೆ ಸಾಕಷ್ಟು ಸೈಟ್ ಗಳನ್ನ ನೀಡಲಾಗಿದೆ.


ಕೇವಲ 48 ಸೈಟ್ ರದ್ದು ಮಾಡಿ ಕಣ್ಣೋರೆಸುವ ಕೆಲಸ ಮಾಡಬೇಡಿ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದ ಬಳಿಕವು ಸೈಟ್ ಹಂಚಿಕೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿಕೆ ನೀಡಿದರು.


Nk Channel Final 21 09 2023