Categories: ಮೈಸೂರು

ನಂಜನಗೂಡಿನಲ್ಲಿ ಬರಿದಾಗುತ್ತಿದೆ ಕಬಿನಿ ಬಲದಂಡ ನಾಲೆಯ ಬೆಲೆಬಾಳುವ ಮಣ್ಣು

ಮೈಸೂರು: ನಂಜನಗೂಡು ತಾಲ್ಲೂಕಿನ ಕಬಿನಿ ಬಲದಂಡೆಯಲ್ಲಿ ಬೆಲೆಬಾಳುವ ನೂರಾರು ಟನ್ ಮಣ್ಣನು ದೋಚಿದರು ಮೌನಕ್ಕೆ ಶರಣಾಗಿರುವ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯ ವೈಖರಿಯ ವಿರುದ್ಧ ಸಂಘಟಕರು ಸಿಡಿದೆದ್ದಿರುವ ಘಟನೆ ನಡೆದಿದೆ.

ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಬಳಿ ಹಾದು ಹೋಗಿರುವ ಕಬಿನಿ ಬಲದಂಡೆ ನಾಲೆಯ ಸರ್ಕಾರಿ ಜಾಗದಲ್ಲಿ ಕಳೆದ ಒಂದು ವಾರಗಳಿಂದ ರಾತ್ರಿ ಹಗಲು ಎನ್ನದೆ ನಿರಂತರವಾಗಿ ಭಾರಿ ಗಾತ್ರದ ಜೆಸಿಬಿ ಯಂತ್ರ ಮತ್ತು ಟಿಪ್ಪರ್ ಗಳ ಮೂಲಕ ಅಕ್ರಮವಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೆ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿಯ ಆದರಿಸಿ ನಂಜನಗೂಡಿನ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಸೇನೆಯ ಸಂಘಟಕರು ನೀರಾವರಿ ಇಲಾಖೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ.

ಸಂಘಟಕರ ಮಾತಿಗೆ ಯಾವುದೇ ಉತ್ತರ ನೀಡದ ಅಧಿಕಾರಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಕ್ರಮವಾಗಿ ಮಣ್ಣು ದೋಚುತ್ತಿದ್ದ ಸ್ಥಳಕ್ಕೆ ಸಂಘಟಕರೇ ಖುದ್ದಾಗಿ ಭೇಟಿ ನೀಡಿ ಟಿಪ್ಪರ್ ಮತ್ತು ಜೆಸಿಬಿ ಯಂತ್ರಗಳನ್ನು ಹಿಡಿದು ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಭರತ್ ಎಂಬುವರ ವಶಕ್ಕೆ ನೀಡಿದ್ದಾರೆ. ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ಅನಧಿಕೃತವಾಗಿ ಪ್ರವೇಶ ಮಾಡಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಂಘಟಕರು ಆಗ್ರಹಪಡಿಸಿದ್ದಾರೆ.

ವಶಕ್ಕೆ ನೀಡಿರುವ ಜೆಸಿಬಿ ಮತ್ತು ಟಿಪ್ಪರ್ ಲಾರಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಕಾನೂನು ರೀತಿ ಕ್ರಮ ಕೈಗೊಂಡು ದಂಧೆಕೋರರಿಗೆ ತಕ್ಕ ಪಾಠ ಕಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಗೀಕಹಳ್ಳಿ ಮಹದೇವಸ್ವಾಮಿ, ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ಮುಳ್ಳೂರು ಸ್ವಾಮಿ, ದಸಂಸ ಪ್ರಧಾನ ಸಂಚಾಲಕ ಮಲ್ಲಹಳ್ಳಿ ಹೂವಯ್ಯ ಎಚ್ಚರಿಕೆ ನೀಡಿದ್ದಾರೆ.

Nisarga K

Recent Posts

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

4 mins ago

ಎಕ್ಸಾಂನಲ್ಲಿ ಫೇಲ್‌ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…

28 mins ago

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿದ ಕಮಿ ರೀಟಾ ಶೆರ್ಪಾ

ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌…

38 mins ago

ಭೀಕರ ಅಪಘಾತ : ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ

ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…

50 mins ago

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…

1 hour ago

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

1 hour ago