ಮೈಸೂರು: ನಗರದ ಸರಸ್ವತಿಪುರಂನಲ್ಲಿ ಮುಳ್ಳು ಹಂದಿ ಪ್ರತ್ಯಕ್ಷವಾಗಿದ್ದು ಆತಂಕದಲ್ಲಿ ನಿವಾಸಿಗಳಿದ್ದಾರೆ. ಮುಳ್ಳು ಹಂದಿ ಕಾಣಿಸಿಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಡಿ. 4ರ ಮಧ್ಯರಾತ್ರಿಯಂದು ಮುಳ್ಳು ಹಂದಿ ಕಾಣಿಸಿಕೊಂಡು ಭಯ ಹುಟ್ಟಿಸಿದೆ. ಮೈಸೂರಿನ ಸರಸ್ವತಿಪುರಂ 6ನೇ ಕ್ರಾಸ್ ನಲ್ಲಿ ಮುಳ್ಳು ಹಂದಿ ಸಂಚಾರ ಮಾಡಿದ್ದು,
ಮುಳ್ಳು ಹಂದಿ ಸಂಚರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.