ಮೈಸೂರು : ಮೈಸೂರಿನ ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿ ನಡೆಸಿದ್ದು, ವಖ್ಫ್ ಹೋರಾಟವಾಗಿ ಮೈಸೂರಿಗೆ ಆರ್ ಅಶೋಕ್ ನೇತೃತ್ವದ ತಂಡ ಭೇಟಿ ನೀಡಿದೆ.
ವಖ್ಫ್ ಬೋರ್ಡ್ ಕ್ಯಾನ್ಸರ್ ರೀತಿ ರಾಜ್ಯದ ರೈತರ ಜಮೀನು, ಎಸ್ಸಿ ಎಸ್ಟಿ ಜಮೀನು, ಮಠ ಮಾನ್ಯ ಆಸ್ತಿಗಳು ವಖ್ಫ್ ಬೋರ್ಡ್ ಎಂದು ಬೋರ್ಡ್ ಹಾಕಲಾಗುತ್ತಿದೆ. ಈ ಹಿಂದೆ ಉಳುವವನೆ ಹೊಲದೊಡೆಯ ಎಂದು ಬಡಾಯಿ ಕೊಚ್ಚಿಕೊಳುತ್ತಿದ್ದರು. ಈಗ ಆ ಆಸ್ತಿ ಕೂಡ ವಖ್ಫ್ ಬೋರ್ಡ್ ದು ಎನ್ನುತ್ತಿದ್ದಾರೆ.
ಕಸಬಾ ಹೋಬಳಿಯ ಸರ್ವೇ ನಂಬರ್ 153 ರಲ್ಲಿ 1.38 ಎಕರೆ ಜಾಗ. ಈ ಜಾಗದಲ್ಲಿ ಪಾಲಿಕೆ ವತಿಯಿಂದ ಎಲ್ಲಾ ಅಭಿವೃದ್ಧಿ ಮಾಡಲಾಗಿದೆ. ಈಗ ಆ ಜಾಗಕ್ಕೆ ವಖ್ಫ್ ಬೋರ್ಡ್ ನೋಟಿಸ್ ನೀಡಿದೆ. ಅಲ್ಲಿನ ಜನರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಸರ್ವೇ 168 ರಲ್ಲೂ ಬೇಲಿ ಹಾಕೊಂಡಿದ್ದಾರೆ. ಆ ಜಾಗದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ.
ಈಗ ಅಲ್ಲಿ ಮಸೀದಿ ನಿರ್ಮಾಣ ಮಾಡಿ ಆಜಾನ್ ಕೂಗಲಾಗುತ್ತಿದೆ. ಗುಂಡೂರಾವ್ ನಗರದ ಜನತೆ ಬೀದಿಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತ ಸಮಸ್ಯೆ ಆಗುತ್ತಿದೆ. ಎಂದು ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ವಕ್ಫ್ ಬೋರ್ಡ್ ಕ್ಯಾನ್ಸರ್ ರೀತಿ ರೈತರ ಜಮೀನನ್ನು ಕಬಳಿಕೆ ಮಾಡಲು ಮುಂದಾಗಿದೆ. ಇದೇ ಕಾಂಗ್ರೆಸ್ ಪಕ್ಷ ಈ ಹಿಂದೆ ಉಳುವವನೇ ಭೂಮಿ ಒಡೆಯ ಎಂದಿತ್ತು. ಆದರೀಗ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳುತ್ತಿದೆ. ಮೈಸೂರಿನಲ್ಲಿ 40ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ.
ಸುಮಾರು 30-40 ವರ್ಷಗಳಿಂದ ವಾಸಿಸುತ್ತಿರುವ ಜನರು ಖಾತೆ ಕಂದಾಯ ಕಟ್ಟುತ್ತಾ ಬಂದಿದ್ದಾರೆ. ಇದೀಗ ಮನೆಹಾಳ ವಕ್ಫ್ ಬೋರ್ಡ್ ಸದರಿ ಜಾಗವನ್ನು ತಮ್ಮದೆಂದು ಹೇಳುತ್ತಿದೆ. ಮುಸ್ಲಿಂ ಕುಟುಂಬವೇ ಇಲ್ಲದ ಸ್ಥಳವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಲಾಗಿದೆ. ಮಸೀದಿ ನಿರ್ಮಾಣ ಮಾಡಲಾಗಿದೆ. ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆ ಭಾಗದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮೈಸೂರಿನಲ್ಲಿ ಹೇಳಿಕೆ.
ಹಿಂದೂಗಳನ್ನ ಎರಡನೇ ದರ್ಜೆಯಾಗಿ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೂ ಕಾಂಗ್ರೆಸ್, ನೆಹರು. 2016 ರಲ್ಲಿ ವಖ್ಫ್ ಬೋರ್ಡ್ ಬಿಲ್ ಜಾರಿ ಮಾಡಿದ್ದು ಮನಮೋಹನ್ ಸಿಂಗ್. ಕಾಂಗ್ರೆಸ್ ಪದೇ ಪದೇ ಓಟ್ ಗೋಸ್ಕರ ಇಂತಹ ಕೆಲಸ ಮಾಡುತ್ತಿದ್ದಾರೆ. ಈ ದೇಶ ಹೊಡೆದದ್ದು ನೆಹರು ಕಾಲದಲ್ಲೇ. ಇಡಿ ರಾಜ್ಯದಲ್ಲಿ ವಖ್ಫ್ ಆಸ್ತಿ ಬದಲಾವಣೆಗೆ ಕಾರಣ ಜಮೀರ್ ಅಹಮ್ಮದ್. ಮೈಸೂರಿನ ಮುನೇಶ್ವರ ನಗರ ಈಗ ಮುಲ್ಲಾ ನಗರ ಆಗೋಗಿದೆ. ಇಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಲ್ಪ ಸಂಖ್ಯತರ ತುಷ್ಟಿಕರಣಕ್ಕೆ ಮುಂದಾದ್ರೆ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ನೀವೇ ಕಾರಣ.
ರೈತರನ್ನ ವಖ್ಫ್ ಬೋರ್ಡ್ ಮುಂದೆ ನಿಲ್ಲಿಸುವ ಕೆಲಸ ಬಿಡಬೇಕು. ಮಠ ಮಾನ್ಯ ಆಸ್ತಿಗಳ ಕಬಳಿಕೆ ಕೈ ಬಿಡಬೇಕು. ವಖ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ವಖ್ಫ್ ಬೋರ್ಡ್ ಬಿಲ್ ತಿದ್ದುಪಡಿ ಮಾಡೇ ಮಾಡ್ತೇವೆ. ಕಾಂಗ್ರೆಸ್ ಎಷ್ಟೇ ವಿರೋಧ ಮಾಡಿದ್ರು ಮಾಡ್ತೀವಿ. ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿಟಿ ರವಿ, ಶಾಸಕ ಶ್ರೀವತ್ಸ, ಮಾಜಿ ಸಂಸದ ನಾರಾಯಣಸ್ವಾಮಿ, ಮಾಜಿ ಶಾಸಕ ಪ್ರೀತಂ ಗೌಡ, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ ಭಾಗಿಯಾಗಿದ್ದಾರೆ.