Bengaluru 18°C

ಮೈಸೂರು: ಚರಂಡಿಯಲ್ಲಿ ನವಜಾತ ಶಿಶು ಪತ್ತೆ: ಆರೋಗ್ಯ ಕೇಂದ್ರಕ್ಕೆ ರವಾನೆ

ತಾಯಿಗೆ ಬೇಡವಾದ ನವಜಾತ ಶಿಶು ಚರಂಡಿಯಲ್ಲಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೈಸೂರು: ತಾಯಿಗೆ ಬೇಡವಾದ ನವಜಾತ ಶಿಶು ಚರಂಡಿಯಲ್ಲಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೊರೆವ ಚಳಿಯಲ್ಲಿ ಇಡೀ ರಾತ್ರಿ ಬರಿಮೈಯಲ್ಲಿ ಚರಂಡಿ ನೀರಿನಲ್ಲಿ ಕಂಡು ಬಂದಿದೆ. ಬೆಳಗಿನ ಜಾವ ಮಗುವಿನ ಅಳು ಕೇಳಿಸಿಕೊಂಡ ಗ್ರಾಮಸ್ಥ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ.


ಮಗುವನ್ನು ಎಚ್.ಡಿ.ಕೋಟೆ ತಾಯಿ ಮಗು ಆರೈಕೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಶಾ ಕಾರ್ಯಕರ್ತೆ ಸರೋಜಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಮಾನವೀಯತೆಯನ್ನ ಸ್ಥಳೀಯರು ಪ್ರಶಂಸಿಸಿದ್ದಾರೆ.


ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Nk Channel Final 21 09 2023