ಮೈಸೂರು: ನವಜಾತ ಶಿಶುವನ್ನು ಬಟ್ಟೆ ಸುತ್ತಿ ಬಾವಿಗೆ ಎಸೆದಿರುವ ಘಟನೆ ಮೈಸೂರಿನ ಸಾಹುಕಾರ್ ಹುಂಡಿ ಗ್ರಾಮದಲ್ಲಿ ನಡೆದಿದೆ.
ಗಂಡು ಮಗುವನ್ನು ಬಟ್ಟೆ ಸುತ್ತಿ ಜಮೀನಿನ ಕೃಷಿ ಹೊಂಡದಲ್ಲಿ ಪೋಷಕರು ಬಿಸಾಡಿ ಹೋಗಿದ್ದಾರೆ. ಬೆಳಿಗ್ಗೆ ಜಮೀನಿಗೆ ಹೋಗುವಾಗ ಮಗು ಅಳುವಿನ ಶಬ್ದ ಕೇಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಆಸ್ಪತ್ರೆಗೆ ತೆರಳುವ ವೇಳೆ ನವಜಾತ ಶಿಶು ಕೊನೆಯುಸಿರೆಳೆದಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.