News Karnataka Kannada
Thursday, April 25 2024
ಮೈಸೂರು

ಮೈಸೂರು ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ

grandmother
Photo Credit : Facebook

ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಜ್ಜಿ ಉಮಾ ಗೋಪಾಲರಾಜ ಅರಸು(83) ಅವರು ಬುಧವಾರ ನಿಧನ ಹೊಂದಿದ್ದಾರೆ. ಯದುವೀರ ತಂದೆ ಸ್ವರೂಪಾನಂದ ಅರಸು ತಾಯಿ ಉಮಾ ಲಕ್ಷ್ಮೀಪುರಂನ ನಿವಾಸದಲ್ಲಿ ಬುಧವಾರ ವಿಧಿವಶರಾಗಿದ್ದಾರೆ. ಉಮಾ ಗೋಪಾಲರಾಜ ಅರಸು ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.53 ರ ಸುಮಾರಿಗೆ ಕೊನೆಯುಸಿರೆಳೆದ್ದಾರೆ.

ಯದುವೀರ ತಂದೆ ಸ್ವರೂಪಾನಂದ ಅರಸು ತಾಯಿ ಉಮಾ ಗೋಪಾಲರಾಜ ಅರಸು ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅಜ್ಜಿಯ ಅಗಲಿಕೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ‘ನನ್ನ ಅಜ್ಜಿಯವರಾದ ಶ್ರೀಮತಿ ಉಮಾ ಮದನ್ ಗೋಪಾಲರಾಜ್ ಅರಸ್ ಅವರ ನಿಧನದ ಬಗ್ಗೆ ನಿಮಗೆ ತೀವ್ರ ದುಃಖದಿಂದ ತಿಳಿಸಲು ಬಯಸುತ್ತೇನೆ. ಅವರು ಯಾವಾಗಲೂ ಸರಳ, ಕರುಣಾಳು ಮತ್ತು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮ‌ ಮಕ್ಕಳು, ಮೊಮ್ಮಕ್ಕಳ ವ್ಯಕ್ತಿತ್ವ, ನಡವಳಿಕೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಎಷ್ಟು ಪ್ರಾಮುಖ್ಯವಾಗಿದ್ದರು, ಎಷ್ಟು ಅಮೂಲ್ಯವಾಗಿದ್ದರು ಎಂಬುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರ ಅಗಲಿಕೆ ನಮ್ಮ ಜೀವನದಲ್ಲಿ ಶೂನ್ಯವನ್ನು ಸೃಷ್ಠಿಸಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

https://www.facebook.com/ykcwadiyar/posts/811899303637403?ref=embed_post

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು