Categories: ಮೈಸೂರು

ರಾಗಿಯಿಂದ ವಿವಿಧ ಅಡುಗೆ ತಯಾರಿಸಿದ ಮಹಿಳೆಯರು

ಮೈಸೂರು: ಮೈಸೂರಿನ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ರಾಗಿಯಿಂದ ತಯಾರಿಸುವ ಅಡುಗೆ ಸ್ಪರ್ಧೆ”ಯನ್ನು ನಗರದ ಕೆ.ಜಿ.ಕೊಪ್ಪಲಿನ ನೇಗಿಲಯೋಗಿ ಸೇವಾ ಭವನದಲ್ಲಿ ಆಯೋಜಿಸಲಾಗಿತ್ತು.

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಹಾರ ತಜ್ಞೆ ಜಿ.ಎಮ್. ಸುನಿತಾ ಅವರು ‘ಆಹಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳನ್ನು ಪಡೆಯಬೇಕೇ ವಿನ: ಔಷಧಿಯೇ ಆಹಾರ ಆಗಬಾರದು ಎಂದು  ತಿಳಿಸಿದರು.

ಪ್ರಸ್ತುತ ಕಾಲದಲ್ಲಿ ಆರೋಗ್ಯವನ್ನು ಮೂಲೆಗೆ ದೂಡಿ ಸಂಪಾದನೆಗಾಗಿ ಓಡುತ್ತಿದ್ದೇವೆ. ಆರೋಗ್ಯವೇ ಭಾಗ್ಯವಾಗಬೇಕು, ಉತ್ತಮ‌ ಆರೋಗ್ಯವಿದ್ದರೇ ನಾವು ದೊಡ್ಡ ಸಾಧನೆಗಳಿಗೆ ಪ್ರಯತ್ನಿಸಬಹುದು. ನಿಮ್ಮ-ನಿಮ್ಮ ಆರೋಗ್ಯಕ್ಕಾಗಿ ಒಂದು ಗಂಟೆಯ ಕಾಲ ಸಮಯ ಮೀಸಲಿಡಿ ಎಂದು ಸಲಹೆ ನೀಡಿದರು.

ಬಾಯಿ ಚಪಲಕ್ಕಾಗಿ ಜಂಕ್ ಫುಡ್ ಗಳಾದ ಪಿಜ್ಜಾ, ಬರ್ಗರ್‌ ಹಾಗೂ ಇತ್ಯಾದಿ ತಿನಿಸುಗಳನ್ನು ತ್ಯಜಿಸಿ ಪ್ರೋಟೀನ್ ದೊರೆಯುವಂತಹ ಮೊಳಕೆ ಕಾಳು , ಸೊಪ್ಪುಗಳನ್ನು ಹೆಚ್ಚೆಚ್ಚು ಬಳಸಿ.  ಇಂದು ಅತ್ಯಂತ ವಿಟಮಿನ್-ಯುಕ್ತ ಆಹಾರ ಪದಾರ್ಥವಾದ ರಾಗಿ ಸಹಾಯದಿಂದ ಅಡುಗೆ ಸ್ಪರ್ಧೆ ನಡೆಯುತ್ತಿರುವುದು ಬಹಳ ಸಂತಸ ತಂದಿದೆ. ಉತ್ತಮ ಆರೋಗ್ಯಕ್ಕಾಗಿ ಮೊದಲು ಮನೆಯ ಮಹಿಳೆ ಬದಲಾಗಬೇಕು ಆಗ ಸಂಪೂರ್ಣ ಮನೆಯ ಜೀವನ ಶೈಲಿ ಬದಲಾಯಿಸಲು ಸಾಧ್ಯ ‌ ಎಂದರು.

ನಂತರ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ‌ಸಂಘದ ಅಧ್ಯಕ್ಷೆ  ಜೆ ಶೋಭ ರಮೇಶ್ ಮಾತನಾಡಿ, ರಾಗಿಯ ತಿನಿಸುಗಳು ಅಂದಾಕ್ಷಣ ನಮ್ಮಲ್ಲಿ ಉತ್ಸಾಹವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇಂದು 20‌ಕ್ಕೂ ಹೆಚ್ಚು ಸ್ಪರ್ಧಿಗಳು ಬಹಳ ಸಡಗರದಿಂದ ಭಾಗವಹಿಸುತ್ತಿರುವುದು ಬಹಳ ವಿಶೇಷ.‌  ನಮ್ಮ ಸಂಸ್ಥೆಯು ಪ್ರೋತ್ಸಾಹ ನೀಡುವ ಸಲುವಾಗಿ ಇಂತಹ ಹಲವು ಕಾರ್ಯಕ್ರಮ ಮಾಡತ್ತಲೇ ಇರುತ್ತದೆ ಎಂದರು.

ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರು ಬಹಳ ಹುರುಪಿನಿಂದ ರಾಗಿ ಹಾಲು, ರಾಗಿಯಿಂದ ತಯಾರಿಸಿದ ನೀರು ದೋಸೆ, ರಾಗಿ ಪೂರಿ,‌ ಉಪ್ಪಿಟ್ಟು, ತಂಬಿಟ್ಟು, ವಡೆ ಹೀಗೆ ಹತ್ತು ಹಲವು ಅಡುಗೆ ತಯಾರಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಅಡುಗೆ ಸ್ಪರ್ಧೆ ಕಾರ್ಯಕ್ರಮದ ನಂತರ ತೋರಣ ಕಟ್ಟುವ ಸ್ಪರ್ಧೆ ಹಾಗೂ ಇತರೆ ಆಟದ ಸ್ಪರ್ಧೆಗಳನ್ನು ಆಯೋಜಿಸಿದ್ದು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು. ತೀರ್ಪುಗಾರರಾಗಿ ಆಹಾರ ತಜ್ಞೆ ಜಿ.ಎಮ್. ಸುನಿತಾ ಹಾಗೂ ಸಂಗೀತ ವಿದ್ವಾನ್ ರಘು ಭಾಗವಹಿಸಿದ್ದರು. ಮಾ.29 ರಂದು ಮೊದಲ 3 ಸ್ಥಾನ ಪಡೆದ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಜಿ. ಶೋಭ, ಖಜಾಂಚಿ ಅನಿತಾ ಹೇಮಂತ್, ಕಾರ್ಯದರ್ಶಿ ಬಿ.ಪಿ. ಉಷಾ ರಾಣಿ, ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.

Ashika S

Recent Posts

ಚಾಮರಾಜನಗರದಲ್ಲಿ ಉಡ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಸಾಗಾಟ ಮಾಡುವ ಜಾಲ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿಗಳನ್ನು ಬೇಟೆಯಾಡಿ ಮಾಂಸ…

8 mins ago

ಮೈಸೂರಿನಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು…

18 mins ago

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

29 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

48 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

58 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

1 hour ago