News Karnataka Kannada
Sunday, April 14 2024
Cricket
ಮೈಸೂರು

ಅಕ್ರಮ ವಿದ್ಯುತ್ ತಂತಿ ಬೇಲಿಯನ್ನು ಸ್ಪರ್ಶಿಸಿ ಕಾಡಾನೆ ಸಾವು

Ullal: Man commits suicide by pouring petrol
Photo Credit : By Author

ಮೈಸೂರು: ಸೋಲಾರ್ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪರಿಣಾಮ ಅದನ್ನು ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೈಸೂರು-ಮಾನಂದವಾಡಿ ರಸ್ತೆಯ ಡಿಬಿ ಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಸಾವನ್ನಪ್ಪಿದ ಕಾಡಾನೆ ಸುಮಾರು 30 ವರ್ಷ ಪ್ರಾಯದ್ದು ಎಂದು ಈ ಹೇಳಲಾಗಿದೆ. ಈ ಕಾಡಾನೆ ಆಹಾರ ಅರಸಿ ಜಮೀನಿಗೆ ನುಗ್ಗಿದ ವೇಳೆ ವಿದ್ಯುತ್ ತಂತಿ ಬೇಲಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮೈಸೂರು-ಮಾನಂದವಾಡಿ ರಸ್ತೆಯ ಡಿಬಿ ಕುಪ್ಪೆ ಗ್ರಾಮದ ಜಮೀನಿನ ಮಾಲೀಕ ಉದಯ್ ಅಲಿಯಾಸ್ ಥಾಮಸ್ ಎಂಬುವರು ತಮ್ಮ ಕೃಷಿ ಫಸಲನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ಜಮೀನಿಗೆ ಸೋಲಾರ್ ಬೇಲಿಯನ್ನು ಕಲ್ಪಿಸಿದ್ದರು. ಆದರೆ ಅಷ್ಟೇ ಮಾಡಿದ್ದರೆ ಕಾಡಾನೆ ಸಾವನ್ನಪ್ಪುತ್ತಿರಲಿಲ್ಲ.

ಥಾಮಸ್ ಅವರು ರಾತ್ರಿ ವೇಳೆ ಸೋಲಾರ್ ಬೇಲಿಗೆ ಮನೆಯಿಂದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಕಲ್ಪಿಸಿದ್ದರು. ಹೀಗಾಗಿ ಆಹಾರ ಅರಸಿಕೊಂಡು ಬಂದ ಕಾಡಾನೆ ಜಮೀನಿಗೆ ನುಗ್ಗುವ ವೇಳೆ ಸೋಲಾರ್ ತಂತಿಯನ್ನು ಸ್ಪರ್ಶಿಸಿದ್ದು ಪರಿಣಾಮ ವಿದ್ಯುತ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಘಟನೆಯ ಬಳಿಕ ಮಾಲೀಕ ಥಾಮಸ್ ತಲೆಮರೆಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದರಲ್ಲದೆ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಸಂಬಂಧ ಮಾಲೀಕ ಥಾಮಸ್ ವಿರುದ್ಧ ಅರಣ್ಯ ಹಕ್ಕು ಕಾಯಿದೆ ಉಲ್ಲಂಘನೆಯಡಿ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು