News Karnataka Kannada
Wednesday, April 17 2024
Cricket
ಮೈಸೂರು

ಕಾಡಂಚಿನ ಗ್ರಾಮಗಳಲ್ಲಿ ಬೆಳೆದ ಫಸಲು ಕಾಡಾನೆ ಪಾಲು

The share of the crop grown in the forested villages
Photo Credit : By Author

ಮೈಸೂರು: ಜಿಲ್ಲೆಯ ನುಗು ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನ ಪ್ರದೇಶವಾದ ತಾಲೂಕಿನ ಹೊಸಹೆಗ್ಗುಡಿಲು ಗ್ರಾಮ ವ್ಯಾಪ್ತಿಯಲ್ಲಿ ರೈತರು ಮಳೆಯನ್ನು ನಂಬಿ ಕಷ್ಟಪಟ್ಟು ಕೃಷಿ ಮಾಡಿದ್ದರಾದರೂ ಇದೀಗ ಕಾಡಾನೆ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಈಗಾಗಲೇ ಈ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮುಸುಕಿನಜೋಳ, ಹತ್ತಿ, ಚೆಂಡುಹೂ, ಟೊಮೆಟೊ ಬೆಳೆಗಳನ್ನು ಬೆಳೆದಿದ್ದು, ಇವುಗಳೆಲ್ಲವೂ ಹುಲುಸಾಗಿ ಬೆಳೆದಿದ್ದು, ಫಸಲಿಗೆ ಬರತೊಡಗಿವೆ. ಆದರೆ ಇದೇ ಸಮಯಕ್ಕೆ ಕಾಡಿನಿಂದ ಬರುವ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲನ್ನು ತಿಂದು ತುಳಿದು ನಾಶ ಮಾಡುತ್ತಿವೆ. ಇದರಿಂದ ಆತಂಕಗೊಂಡಿರುವ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಈ ನಡುವೆ ಗ್ರಾಮದ ರೈತರಾದ ಗೋವಿಂದನಾಯಕ, ಶಿವಣ್ಣ ಎಂಬುವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಮುಸುಕಿನಜೋಳ ಬೆಳೆದಿದ್ದರು. ರಾತ್ರಿ ವೇಳೆ ಜಮೀನಿಗೆ ನುಗ್ಗಿದ ಕಾಡಾನೆಗಳು ತುಳಿದು, ತಿಂದು ನಾಶಗೊಳಿಸಿವೆ. ಇದರಿಂದ ಸಾಲ ಮಾಡಿ, ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಗಳ ಪಾಲಾಯಿತು ಎಂಬ ಚಿಂತೆಯಲ್ಲಿದ್ದಾರೆ. ಅವರು ಹೇಳುವಂತೆ ಮುಸುಕಿನ ಜೋಳ ಬಿತ್ತನೆ ಮಾಡಲು 50 ಸಾವಿರ ರೂ. ಖರ್ಚು ಮಾಡಲಾಗಿದ್ದು, ಬೆಳೆಯೂ ಉತ್ತಮವಾಗಿ ಬೆಳೆದು ಹೆಚ್ಚು ಇಳುವರಿಯ ನಿರೀಕ್ಷೆಯಲ್ಲಿದ್ದೆವು. ಮುಂದಿನ ವಾರದಲ್ಲಿ ಕಟಾವು ಬೇಕಾಗಿತ್ತು. ಆದರೆ, ಕಾಡಾನೆಗಳು ಏಕಾಏಕಿ ದಾಳಿ ನಡೆಸಿ, ಜೋಳದ ಬೆಳೆಯನ್ನು ನಾಶಗೊಳಿಸಿವೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸ್ಥಳಕ್ಕೆ ನುಗು ವನ್ಯಜೀವಿ ವಲಯ ಅರಣ್ಯಾಧಿಕಾರಿ ನಿವೇದಿತಾ, ಲಕ್ಷ್ಮಣ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸರ್ಕಾರದ ಪರಿಹಾರವನ್ನು ಶೀಘ್ರದಲ್ಲೇ ಕೊಡಿಸುವ ಭರವಸೆ ನೀಡಿದ್ದಾರೆ. ಈ ಮಧ್ಯೆ ಮುಖಂಡ ಗ್ರಾಮೀಣ ಮಹೇಶ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸಭೆ ನಡೆಸಿ, ರೈಲ್ವೆ ಕಂಬಿ ಅಳವಡಿಸುವವರೆಗೆ ಕಾಡು ಪ್ರಾಣಿಗಳನ್ನು ಹಾವಳಿ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಇಲಾಖೆ ತಾತ್ಕಾಲಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಕಾಡಾನೆಗಳು ಅರಣ್ಯ ದಾಟಿ ಬರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಿದೆ. ಇಲ್ಲದೆ ಹೋದರೆ ರೈತರು ಬೆಳೆದ ಬೆಳೆ ಕಾಡಾನೆಗಳ ಪಾಲಾಗುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು