News Karnataka Kannada
Thursday, April 18 2024
Cricket
ಮೈಸೂರು

ದೇಶದ ಆರ್ಥಿಕ ಬೆಳವಣಿಗೆ ಸಂಖ್ಯಾಶಾಸ್ತ್ರದ ಮೇಲೆ ನಿಂತಿದೆ: ಜಿ.ಪಂ ಯೋಜನಾಧಿಕಾರಿ ಧನುಷ್

The country's economic growth is based on statistics: Dhanush, Project Officer, G.P.
Photo Credit : By Author

ಮೈಸೂರು: ಸಂಖ್ಯಾ ಶಾಸ್ತ್ರದ ವಿಚಾರದಲ್ಲಿ ಪ್ರೊ.ಪ್ರಶಾಂತ್ ಚಂದ್ರ ಲೋಬಿಸ್ ಅವರ ಕೊಡುಗೆ ಬಹು ಮುಖ್ಯವಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಸಂಖ್ಯಾಶಾಸ್ತ್ರದ ಮೇಲೆ ನಿಂತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್ ತಿಳಿಸಿದರು.

ಪ್ರೊ.ಪ್ರಶಾಂತ್ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನದ ಪ್ರಯುಕ್ತ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವತಿಯಿಂದ ಸಾಂಖ್ಯಿಕ ದಿನಾಚರಣೆಯನ್ನು ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರ್ಥಿಕತೆ ಬದಲಾವಣೆಗೆ ಸಂಖ್ಯಾ ಶಾಸ್ತ್ರ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬ ಬಗ್ಗೆ ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಜೆ.ಮಹೇಂದ್ರ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಸಂಖ್ಯೆಗಳು ಒಳಗೊಂಡಿರುತ್ತದೆ. ಸಂಖ್ಯಾ ಅಂಶಗಳು ಪ್ರತಿಯೊಂದು ಇಲಾಖೆಗಳಲ್ಲೂ ಸಹ ತನ್ನ ಮೂಲ ಅಂಶಗಳನ್ನು ನೀಡುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಾದರೆ ಸಾಂಖ್ಯಿಕ ಅಂಶಗಳು ಪ್ರಮುಖವಾಗಿ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಇಲಾಖೆಗಳಲ್ಲಿಯೂ ಕೂಡ ಸಾಂಖ್ಯಿಕ ವಿಭಾಗದ ಕಾರ್ಯವು ಅತ್ಯಂತ ಮುಖ್ಯವಾದದ್ದು ನಮ್ಮ ಇಲಾಖೆಗೆ ಒಳಪಡುವ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆಗಳಿದ್ದರೂ ಕೂಡ ಧೈರ್ಯವಾಗಿ ಮುನ್ನುಗ್ಗಿ ಎಂದರು.

ಪ್ರೊ. ಪ್ರಶಾಂತ್ ಚಂದ್ ಮಹಾಲನೋಬಿಸ್ ಅವರ ವಿಚಾರಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಪ್ರಮುಖವಾಗಿ ಜಿಲ್ಲಾ ಸಂಬಂಧಿತ ಇಲಾಖೆಗಳು, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ ಎಂದು ತಿಳಿಸಿದರು.

ಸಹಾಯಕ ನಿರ್ದೇಶಕಿ ದಿವ್ಯ ಅವರು ಮಾತನಾಡಿ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಈ ಸಾಂಖ್ಯಿಕ ಇಲಾಖೆಯು ತಾಯಿ ಬೇರು ಇದಂತೆ ಯಾವುದೇ ಇಲಾಖೆಯು ತನ್ನ ಕಾರ್ಯವನ್ನು ನಿರ್ವಹಿಸಲು ನಮ್ಮ ಇಲಾಖೆಯು ಮೂಲ ಅಂಶವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯ ವೈಖರಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಕೆಲವು ಇಲಾಖೆಗಳಲ್ಲಿ ಸಂಖ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಕಾರ್ಯಗಳು ನಡೆಯುವುದರ ಬಗ್ಗೆ ತಿಳಿಸಿದರು. ವೃದ್ದಾಪ್ಯ ವೇತನ, ವಿಧವಾ ವೇತನ ಮತ್ತು ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಕಂಡು ಬರುವ ವಿವಿಧ ಲೋಪ ದೋಷಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ದಾಕ್ಷಾಯಣಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು