News Karnataka Kannada
Friday, April 12 2024
Cricket
ಮೈಸೂರು

ಫೆ.6 ರಿಂದ ತಾಲ್ಲೂಕಿನಲ್ಲಿ ಪೌತಿ ಖಾತೆ ಆಂದೋಲನ – ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು

Tahsildar Shivakumar Kasnoor
Photo Credit : News Kannada

ನಂಜನಗೂಡು: ನಂಜನಗೂಡು ತಾಲೂಕಿನಲ್ಲಿ ಫೆ. 6 ರಿಂದ 15 ರವರೆಗೆ ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂಜನಗೂಡು ತಾಲ್ಲೂಕಿನಲ್ಲಿ 15 ಸಾವಿರ ಪೌತಿ ಖಾತೆಗಳು ಕಾರಣಾಂತರಗಳಿಂದ ಬಾಕಿ ಉಳಿದಿವೆ. ಪೌತಿ ಖಾತೆ ಮಾಡಿಸಲು ತಮ್ಮ ವ್ಯಾಪ್ತಿಯ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ಪೌತಿ ಖಾತೆ ಕೋರಿ ಅರ್ಜಿ, ಚಾಲ್ತಿ ಸಾಲಿನ ಪಹಣಿ (ಆರ್ ಟಿ ಸಿ) ಮೃತ ಖಾತೆದಾರರ ಮರಣ ಪತ್ರ, ಆಧಾರ್ ಕಾರ್ಡ್, ವಂಶ ವೃಕ್ಷ ದಾಖಲಾತಿಗಳನ್ನು ನೀಡಿ ಪೌತಿ ಖಾತೆ ಮಾಡಿಸಿಕೊಳ್ಳಬಹುದು. ಇದೇ ತಿಂಗಳು ವಿತರಣೆ ಮಾಡಲಾಗುವುದು. ಫೆ.6 ರಿಂದ ಫೆ.15 ರವರೆಗೆ ಅರ್ಜಿಯನ್ನು ಸ್ವೀಕಾರ ಮಾಡಲಾಗುವುದು.

ಫೆ. 6 ರಂದು ಶಾಸಕರು ಪೌತಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು