Categories: ಮೈಸೂರು

ತಿ.ನರಸೀಪುರ: ದಲಿತ ಸಿಎಂ ಘೋಷಣೆ ಮಾಡಿದ ಪಕ್ಷಕ್ಕೆ ಬೆಂಬಲ, ಮುಖಂಡರ ಘೋಷಣೆ

ತಿ.ನರಸೀಪುರ: ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿದ್ದರೂ, ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಸಿಎಂ ಪದವಿ ದಕ್ಕದೆ ಇರುವುದು ದುರಾದೃಷ್ಟಕರ ವಿಷಯ.  ಮುಂದಿನ ಚುನಾವಣೆಯಲ್ಲಿ ದಲಿತ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಪಕ್ಷಕ್ಕೆ ದಲಿತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಸಲೆ ಶಶಿಕಾಂತ ತಿಳಿಸಿದರು.

ಇತ್ತೀಚಿಗೆ ರಾಜ್ಯ ದಲಿತ ಐಕ್ಯ ಸಮಿತಿಯು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದು, ಇದು ಆ ಸಂಘಟನೆಯ ವೈಯಕ್ತಿಕ ಹೇಳಿಕೆಯಾಗಿದೆ. ಈ ಚುನಾವಣೆಯಲ್ಲಿ ಯಾವ ಪಕ್ಷ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆಯೋ ಆ ಪಕ್ಷಕ್ಕೆ ದಲಿತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ದಲಿತ ಸಮುದಾಯದ ಹಿರಿಯ ನಾಯಕರಿದ್ದರೂ ಅನ್ಯ ಸಮುದಾಯದ ಕಿರಿಯ ನಾಯಕರಿಗೆ ಮುಖ್ಯಮಂತ್ರಿಯ ಹುದ್ದೆ  ನೀಡುತ್ತಿದೆ. ಇದು ರಾಜಕೀಯದಲ್ಲಿನ ಅಸ್ಪೃಶ್ಯತೆ . ಹಲವು ದಶಕಗಳಿಂದ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದರೂ ದಲಿತರಿಗೆ ಆಯಕಟ್ಟಿನ ಸ್ಥಾನಮಾನ ಅಥವ ಮುಖ್ಯಮಂತ್ರಿ ಗಾದಿಯನ್ನು ತಪ್ಪಿಸುವ ಜಾತಿವಾದಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ನಿಚ್ಚಳವಾಗಿದೆ. ದಲಿತ ರಾಜಕೀಯ ಮುತ್ಸದಿಗಳಾದ ಕೆ.ಎಚ್.ರಂಗನಾಥ್, ಬಿ.ರಾಚಯ್ಯ , ಎನ್.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಪದವಿ ನೀಡದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ವಂಚಿಸಿವೆ. ದಲಿತರ ಮತ ಕಾಂಗ್ರೆಸ್ ನ ಸಂಪ್ರದಾಯ ಮತ ಎಂದು ಬಿಂಬಿತವಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ದಲಿತ ಸಿಎಂ ಘೋಷಣೆ ಮಾಡಿದ ಪಕ್ಷಕ್ಕೆ ರಾಜ್ಯದಲ್ಲಿರುವ ಎಲ್ಲ ದಲಿತ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದರು.

ಸಾಮಾಜಿಕ ಸಮಿತಿಯ ಅಧ್ಯಕ್ಷ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿ, ದಲಿತರಿಗೆ ಸಿಎಂ ಸ್ಥಾನ ನೀಡದಿರುವುದು ಕಪ್ಪುಚುಕ್ಕೆ.ಅರ್ಹತೆ ಇದ್ದರೂ ದಲಿತ ಮುಖಂಡರಿಗೆ ಜೆಡಿಎಸ್ ,ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ.ಹಾಗಾಗಿ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಪಕ್ಷಕ್ಕೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದರು.

ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಸೋಸಲೆ ರಾಜಶೇಖರ್, ಬನ್ನಹಳ್ಳಿ ಸೋಮಣ್ಣ, ದಲಿತ ಜಾಗೃತಿ ಸಮಿತಿ ಅಧ್ಯಕ್ಷ ತುಂಬಲ ಮಂಜುನಾಥ್ ಕರೋಹಟ್ಟಿ ಪ್ರಭುಸ್ವಾಮಿ, ಯಡದೊರೆ ಮಹದೇವಯ್ಯ, ಅಲಗೂಡು ಶಿವಣ್ಣ , ಚೌಹಳ್ಳಿ ಜಯರಾಮು, ನಿಂಗರಾಜು ಇತರರು ಹಾಜರಿದ್ದರು.

Gayathri SG

Recent Posts

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

14 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

16 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

34 mins ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

43 mins ago

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

50 mins ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

1 hour ago