News Karnataka Kannada
Monday, April 22 2024
Cricket
ಮೈಸೂರು

ಕಠಿಣ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ: ಸತೀಶ್ ನಂಜಪ್ಪ

Success is possible if you work hard: Satish Nanjappa
Photo Credit : By Author

ಮೈಸೂರು: ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಇದ್ದಲ್ಲಿ ಉದ್ಯಮಶೀಲತೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಯಶಸ್ವಿಯಾಗಬಹುದು ಎಂದು ಇಂಡಿಯಾ ಅಸೋಸಿಯೇಷನ್ ಆಫ್ ಅಮೆರಿಕಾ ಅಧ್ಯಕ್ಷ ಸತೀಶ್ ನಂಜಪ್ಪ ತಿಳಿಸಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯುಎಸಿ), ಕನ್ನಡ ಮತ್ತು ಇಂಗ್ಲಿಷ್ ವಿಭಾಗ, ಜನಪರ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳಾ ಉದ್ಯಮಶೀಲತೆ ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬೇರೆಯವರು ಏನೇ ಸಲಹೆ- ಸಹಕಾರ ಕೊಡಬಹುದು. ಆದರೆ ಅಂತಿಮ ನಿರ್ಧಾರ ನಮ್ಮದೇ ಆಗಿರುತ್ತದೆ. ಆದ್ದರಿಂದ ಒಳಿತು- ಕೆಡಕುಗಳ ಬಗ್ಗೆ ಯೋಚಿಸಿ ತೀರ್ಮಾನ ಮಾಡಬೇಕು ಎಂದರು.

ಹಣ, ಉದ್ಯೋಗ ಸಂಪಾದನೆ ಮಾಡಬೇಕಾದರೆ ಜ್ಞಾನ ಬೇಕು. ಅದಕ್ಕಾಗಿ ವಿದ್ಯಾರ್ಥಿನಿಯರು ಗುಂಪು ಚರ್ಚೆಯಲ್ಲಿ ತೊಡಗಬೇಕು. ಸಂದೇಹ ಬಂದ ವಿಷಯಗಳ ಬಗ್ಗೆ ಅಧ್ಯಾಪಕರ ಬಳಿ ಚರ್ಚಿಸಬೇಕು ಎಂದು ಸಲಹೆ ನೀಡಿದರು.

ನದಿ ಒಂದು ಸಮನಾಗಿ ಹರಿಯುತ್ತಿರುತ್ತದೆ. ಅದರ ಗುರಿ ಸಮುದ್ರ ಸೇರುವುದೇ ಆಗಿರುತ್ತದೆ. ಅದೇ ರೀತಿ ವಿದ್ಯಾರ್ಥಿನಿಯರ ಸಾಧನೆಗೆ ಚಿಂತನಾಲಹರಿ ಮುಖ್ಯವಾಗುತ್ತದೆ. ಮಹಿಳೆಯರಲ್ಲಿ ಗಟ್ಟಿತನ ಇದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಪೆಪ್ಸಿ ಕಂಪನಿ ಸಿಇಒ ಇಂದಿರಾ ನೂಯಿ ಅವರು ಕಥೆಯ ಮೂಲಕ ವಿವರಿಸಿದರು.

ಭಾರತ ಅದರಲ್ಲೂ ಕರ್ನಾಟಕ ಐಟಿ-ಬಿಟಿ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಐಟಿ ಎಂದರೇ ಇನ್ಪೋಸಿಸ್‌ನ ಎನ್.ಆರ್. ನಾರಾಯಣಮೂರ್ತಿ, ಬಿಟಿ ಎಂದರೇ ಕಿರಣ್ ಮಂಜುಂದಾರ್ ಅವರ ಹೆಸರು ಪ್ರಸ್ತಾಪವಾಗುತ್ತದೆ ಎಂದರು.

ಮೊದಲೆಲ್ಲಾ ಅಮೆರಿಕಾ ವೀಸಾ ಪಡೆಯಲು ಚೆನ್ನೈ, ಹೈದ್ರಾಬಾದ್, ಮುಂಬೈ ಇಲ್ಲವೇ ದೆಹಲಿಗೆ ಹೋಗಬೇಕಿತ್ತು. ಈಗ ನಮ್ಮ ಒಕ್ಕೂಟದ ಮನವಿ ಮೇರೆಗೆ ಬೆಂಗಳೂರಿನಲ್ಲಿಯೇ ವೀಸಾ ಕಚೇರಿ ತೆರೆಯಲು ಅಮೆರಿಕಾ ಸಮ್ಮಿತಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿ ಕಾಲಕ್ಕೆ ಇದನ್ನು ಪ್ರಕಟಿಸಲಾಗಿದೆ ಎಂದರು.

ಮೈಸೂರು ವಿವಿ ಅಂಕಿ ಅಂಶಗಳ ಘಟಕದ ನೋಡಲ್ ಅಧಿಕಾರಿ ಪ್ರೊ.ಬಸಪ್ಪ, ಪ್ರಾಂಶುಪಾಲ ಡಾ.ಡಿ.ರವಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ. ಮಹೇಶ ಚಿಕ್ಕಲ್ಲೂರು, ಐಕ್ಯುಎಸಿ ಸಂಚಾಲಕ ವಿ.ನಂದಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಕೆಂಡಗಣ್ಣೇಗೌಡ, ಪ್ರಾಧ್ಯಾಪಕ ಡಾ.ಎಚ್.ಜೆ. ಭೀಮೇಶ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು, ಕಾವ್ಯಾ ಎಂ.ಕಟ್ಟಿ, ದರ್ಶಿನಿ ಭೂಮಿಕಾ ಕುಂಬಾರ್, ಡಾ.ಕೆ.ಸಿದ್ದರಾಜು, ಪರಶುರಾಮಮೂರ್ತಿ, ನಾಗೇಂದ್ರಕುಮಾರ್ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು