Categories: ಮೈಸೂರು

ಸಿದ್ದರಾಮೋತ್ಸವದಿಂದ ಪುಟಿದೆದ್ದು ಬಂದ ಸಿದ್ದರಾಮಯ್ಯ!

ಮೈಸೂರು: ಕಳೆದ ವರ್ಷ 75ನೇ ವರ್ಷದ ಹುಟ್ಟು ಹಬ್ಬ ಆಚರಣೆ ವೇಳೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ರಾಜಕೀಯವಾಗಿ ಇನ್ನಷ್ಟು ಬಲಿಷ್ಠರಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವ ತನಕ ಬೆಳೆದು ಬಂದಿರುವುದು ಗಮನಾರ್ಹವಾಗಿದೆ.

ಅವತ್ತು ಸಮಾವೇಶಕ್ಕೆ ನೆರೆದ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಸಮೂಹ ನೋಡಿದ ಬಳಿಕ ಅವರಲ್ಲಿದ್ದ ಉತ್ಸಾಹ ಇಮ್ಮಡಿಯಾಗಿತ್ತು. ಆ ಉತ್ಸಾಹದಲ್ಲಿಯೇ ಅವರು ಪಕ್ಷ ಸಂಘಟನೆಗೆ ಇಳಿಯುವ ಮೂಲಕ ಇವತ್ತು ಅಧಿಕಾರದ ಗದ್ದುಗೆ ಹಿಡಿಯುವಂತಾಗಿದೆ. ಜತೆಗೆ ಅವರ ಅದೃಷ್ಟದ ಕ್ಷೇತ್ರ ವರುಣಾದ ಜನರು ಕೈಹಿಡಿದಿದ್ದು ಸಿಎಂ ಆಗಲು ಕಾರಣವಾಗಿದೆ.

ಸಿದ್ದರಾಮೋತ್ಸವ ಒಂದು ಅರ್ಥದಲ್ಲಿ ಕಾಂಗ್ರೆಸ್ ನಾಯಕರು ಒಗ್ಗೂಡಲು ಕಾರಣವಾಗಿತ್ತು. ಅಲ್ಲಿ ತನಕ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದ ಡಿಕೆಶಿ ಮತ್ತು ಸಿದ್ದು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದರು. ಅವತ್ತು ವೇದಿಕೆಯಲ್ಲಿ ತಮ್ಮ ಹಿಂದಿನ ಸರ್ಕಾರಕ್ಕೂ ಬಿಜೆಪಿಯ ಶೇ.40 ಪರ್ಸೆಂಟ್ ಸರ್ಕಾರಕ್ಕೂ ಹೋಲಿಕೆ ಮಾಡಿ ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪಥ ಮಾಡುವಂತೆ ಹೇಳಿದರು. ಅದು ಈಗ ಕೈಗೂಡಿದೆ.

1978ರಲ್ಲಿ ಈ ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಹಳ್ಳಿಗೆ ಸಿಟಿ ಬಸ್, ವರುಣಾ ಚಾನೆಲ್ ಇರಲಿಲ್ಲ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಏನು ಮಾಡದವರಿಗೆ ಅಧಿಕಾರ ಕೊಡುತಿದ್ದೀರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದರು.

ಅವತ್ತೇ ಚುನಾವಣೆಗೆ ತಯಾರಿ ನಡೆಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡಿದ್ದರು. ಜತೆಗೆ ಸಿಕ್ಕ ವೇದಿಕೆಯನ್ನು ಸದುಪಯೋಗಪಡಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದರು. ಜತೆಗೆ ಪಕ್ಷದ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವಂತೆ ಮಾಡಿದೆ.

Gayathri SG

Recent Posts

ಹೆಣ್ಣಿನ ಘನತೆಗೆ ಧಕ್ಕೆ; ದೇಶದದ್ಯಾಂತ ಪ್ರಜ್ವಲಿಸಿದ ಪ್ರಜ್ವಲ್‌ ಪೆನ್‍ಡ್ರೈವ್ !

ಹಾಸನದ ಸಂಸದರೂ ಆಗಿರೋ  ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್. ಈತನ ಕಾಮಕಾಂಡದ…

48 seconds ago

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…

31 mins ago

ಚಾರ್ಜ್​ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಭಸ್ಮ

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.

46 mins ago

ದನದ ಮಾಂಸ ರಫ್ತಿನಲ್ಲಿ ಬಿಜೆಪಿ 2ನೇ ಸ್ಥಾನ: ಸಂತೋಷ್‌ ಲಾಡ್‌

ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…

57 mins ago

ಚಾಮರಾಜನಗರ: ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…

1 hour ago

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.

1 hour ago