ಮೈಸೂರು

ಮೈಸೂರು: ಮೋದಿ@20 ಕೃತಿ ಕುರಿತು ವಿಚಾರ ಸಂಕಿರಣ

ಮೈಸೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಮೋದಿ@20 ಕೃತಿ ಕುರಿತಾದ ನರೇಂದ್ರ ಮೋದಿ ಅವರ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ ಕುರಿತ ವಿಚಾರ ಸಂಕಿರಣ ನಡೆಯಿತು

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು, ನರೇಂದ್ರ ಮೋದಿ 12.5 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ, 8 ವರ್ಷ ಪ್ರಧಾನ ಮಂತ್ರಿಯಾಗಿ ನೀಡಿರುವ ಆಡಳಿತ ಅಂತಃಕರಣದಿಂದ ಕೂಡಿದೆ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಬಳಿಕ ಈ ದೇಶದಲ್ಲಿ ಅಂತಃಕರಣದ ಆಡಳಿತ ನೀಡಿದವರು ನರೇಂದ್ರ ಮೋದಿ ಎಂದರು.

ಕೆಂಪುಕೋಟೆಯಲ್ಲಿ ನಿಂತು ಹಿಂದಿನ ಪ್ರಧಾನಿಗಳಂತೆ ಭಾಷಣ ಮಾಡದ ಮೋದಿ ಅವರು, ಶೌಚಾಲಯ ನಿರ್ಮಾಣ ಕ್ರಾಂತಿಗೆ ಕರೆ ನೀಡಿದರು. ಗೃಹ ಬಳಕೆ ಅನಿಲದ ಸಬ್ಸಿಡಿ ಬಿಡುವಂತೆ ಮನವಿ ಮಾಡಿ 9 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ನೀಡಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನ ಕೊಟ್ಟರು. ಜನ್‌ಧನ್ ಖಾತೆ ಮೂಲಕ ಶೇ.58 ಜನರು ಬ್ಯಾಂಕ್ ಖಾತೆ ಮಾಡಿಸಿಕೊಂಡರು.

2 ವರ್ಷಗಳ ಕೊರೊನಾ ಸಾಂಕ್ರಾಮಿಕ ರೋಗದಿಂದ ಅನೇಕರು ಮೃತರಾದರು. ಆ ಎರಡು ವರ್ಷ ಹಸಿವಿನಿಂದ ಯಾರೂ ಸಾಯಲಿಲ್ಲ. 200 ಕೋಟಿ ಜನರು ಲಸಿಕೆ ಪಡೆದರು. ಲಸಿಕೆ ವಿರೋಧಿಸಿದವರು ಪಡೆದದ್ದು ಮೋದಿ ಅವರ ಸಾಧನೆಯಾಗಿದೆ. ಈ ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ಮತ್ತು ವಿಶ್ವಾಸ. ರಷ್ಯಾ-ಉಕ್ರೇನ್ ಯುದ್ಧದ ವೇಳೆ 20 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದರು. ಹಾಗಾಗಿ ಮೋದಿ@20 ಕೃತಿಯಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ತಮ್ಮ ಲೇಖನದಲ್ಲಿ ಮೋದಿ ಯುವಕರ ಕಣ್ಮಣಿ, ಯುವಕರ ಆದರ್ಶ ಎಂದು ಹೇಳಿರುವುದು ಸಮರ್ಥ ಗ್ರಹಿಕೆ ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಪ್ರಧಾನಿ ನರೇಂದ್ರ ನೋದಿ ಅವರನ್ನು ಹುಡುಕಿಕೊಂಡು ಬಂದು ಮಾತಾಡಿಸುತ್ತಾರೆ. ಹಾಗೇ ಪಾಕಿಸ್ತಾನದ ಸಚಿವರೊಬ್ಬರು ಮೋದಿಯಂತಹ ನಾಯಕ ನಮಗೂ ಸಿಗಬೇಕಾಗಿತ್ತು ಎಂದಿದ್ದಾರೆ. ಯೋಗ, ಆಯುರ್ವೇದ ಸೇರಿ ಭಾರತದ ಪರಂಪರೆಗೆ ವಿಶ್ವಮಾನ್ಯತೆ ದೊರೆತದ್ದು ಮೋದಿ ಅವರ ಹೆಗ್ಗಳಿಕೆ. ಜೂ.21ರಂದು ಕರೆಕೊಟ್ಟ ವಿಶ್ವ ಯೋಗ ದಿನಕ್ಕೆ ಜಗತ್ತಿನ 195 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳು ಆಚರಿಸಿದವು. ಉಳಿದ ಮೂರು ರಾಷ್ಟ್ರಗಳಿಗೆ ಮಾತ್ರ ಯೋಗ ದಿನ ಆಚರಿಸುವ ಯೋಗಾ ಇರಲಿಲ್ಲ ಎಂದರು.

ದಲಿತ ಸಮುದಾಯದ ರಾಮನಾಥ್ ಕೋವಿಂದ್, ಈಗ ಅದಿವಾಸಿ ಸಮಾಜದ ದ್ರೌಪದಿ ಮುರ್ಮು ಅವರಿಗೆ ದೇಶದ ಅತ್ಯುನ್ನತ ಸ್ಥಾನ ನೀಡಿದರು. ಇದು ದೀನ ದಲಿತರ ಉದ್ಧಾರದ ಬಗ್ಗೆ ಕೇವಲ ಮಾತನಾಡದೇ ಅಧಿಕಾರ ನೀಡಿದರು. ಈ ಉದಾತ್ತ ಗುಣವನ್ನು ದೇಶದ ಜನರು ಗಮನಿಸಬೇಕು ಎಂದು ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ವಕೀಲ ಓ.ಶ್ಯಾಂಭಟ್, ಸಮಾಜ ಸೇವಕ ಮಾ.ವೆಂಕಟರಾಮ್, ಮೂಳೆರೋಗ ತಜ್ಞ ಡಾ.ರವೀಂದ್ರನಾಥ್ ಹಾಜರಿದ್ದರು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago