ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 12 ನಾಮಪತ್ರ ಅಂಗೀಕಾರ ಆಗಿವೆ ಎಂದು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿದರು.
ನಂಜನಗೂಡು ನಗರದ ತಾಲೂಕು ಆಡಳಿತ ಭವನದ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು,
ಏಪ್ರಿಲ್ 13 ರಿಂದ 20 ರವರೆಗೆ ಸುಮಾರು 12 ಅಭ್ಯರ್ಥಿಗಳು 12 ನಾಮಪತ್ರಗಳನ್ನು ಸಲ್ಲಿಸಿದ್ದರು.
ಕಾಂಗ್ರೆಸ್ ನಿಂದ 1 ನಾಮಪತ್ರ ಸಲ್ಲಿಕೆ, ಬಿಜೆಪಿಯಿಂದ 1, ಆಮ್ ಆದ್ಮಿ ಪಾರ್ಟಿಯಿಂದ ಒಂದು ನಾಮಪತ್ರ, ಬಿ ಎಸ್ ಪಿ ಪಕ್ಷದಿಂದ ಒಂದು ನಾಮಪತ್ರ, ಕೆಆರ್ಎಸ್ ಪಕ್ಷದಿಂದ ಒಂದು ನಾಮಪತ್ರ, ಸೇರಿದಂತೆ ಸ್ವಾತಂತ್ರ್ಯ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಯಿಂದ ನಾಮಪತ್ರಗಳ ಪರಿಶೀಲನೆಯನ್ನು ಮಾಡಲಾಯಿತು. 12 ನಾಮಪತ್ರಗಳು ಅಂಗೀಕೃತವಾಗಿವೆ ಯಾವುದೇ ಲೋಪ ದೋಷವಿಲ್ಲ ಎಂದು ಮಾಹಿತಿ ನೀಡಿದರು.
ಏಪ್ರಿಲ್ 24ರಂದು ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರವನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.