Categories: ಮೈಸೂರು

ಮೈಸೂರು: ವಾರ್ಷಿಕ ಮಹಾದಸರ ಉತ್ಸವದಲ್ಲಿ ಭಾಗವಹಿಸಲಿರುವ ರಷ್ಯಾದ ನಟಿ ಜೂಲಿಯಾ ಬ್ಲಿಸ್

ಮೈಸೂರು,ಜೂ.30: ಮೈಸೂರು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಎಂ) ತನ್ನ 15ನೇ ವರ್ಷದ ವಾರ್ಷಿಕ ಮಹಾದಸರ 2022ರ ವಾರ್ಷಿಕ ಉತ್ಸವವನ್ನು ಜೂನ್ 30 ರಿಂದ ಜುಲೈ 2 ರವರೆಗೆ ಆಯೋಜಿಸಿದೆ.

ಈ ಉತ್ಸವವು 2500+ ವಿದ್ಯಾರ್ಥಿಗಳು, 250+ ಸಿಬ್ಬಂದಿಗಳ ಭಾಗವಹಿಸುತ್ತಿದ್ದು, ಇವರಿಗಾಗಿ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವ ಸಾರ್ವಜನಿಕರಿಗು ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಬಯಾಥ್ಲಾನ್, ಸಾರ್ವಜನಿಕರು ಮತ್ತು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ಕಾರ್ಯಕ್ರಮವಾಗಿದೆ, ಇದು ಓಟ (5 ಕಿ.ಮೀ) ಮತ್ತು ಸೈಕ್ಲಿಂಗ್ (10 ಕಿ.ಮೀ) ಸಂಯೋಜನೆಯಾಗಿದ್ದು, “ಎಲ್ಲರಿಗೂ ಆರೋಗ್ಯ ಮತ್ತು ಸಂತೋಷ” ಎಂಬ ಧ್ಯೇಯವಾಕ್ಯದೊಂದಿಗೆ, ಶುಕ್ರವಾರ ಬೆಳಿಗ್ಗೆ 7 ರಿಂದ 8.30 ರವರೆಗೆ, ಯುಒಎಂ (ಕುವೆಂಪು ಪ್ರತಿಮೆ) ಪ್ರವೇಶ ದ್ವಾರದಿಂದ ಜೆ.ಕೆ.ಗ್ರೌಂಡ್ ಮೂಲಕ ಪ್ರಾರಂಭವಾಗಿ ಎಂಐಟಿ ಮೈಸೂರಿನಲ್ಲಿ ಕೊನೆಗೊಳ್ಳುತ್ತದೆ.

ಆಸಕ್ತರು ನೋಂದಣಿಗಾಗಿ www.mitmysore.in ಭೇಟಿ ನೀಡಬಹುದು ಮತ್ತು ಮೊದಲ 800 ಸ್ಪರ್ಧಿಗಳು ಡೆಕಾಥ್ಲಾನ್ ನಿಂದ ಟಿ-ಶರ್ಟ್ ಪಡೆಯುತ್ತಾರೆ. ನೋಂದಣಿಗೆ ಅಥವಾ ಭಾಗವಹಿಸುವಿಕೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಜಿ.ಹೇಮಂತ್ ಕುಮಾರ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೈಸೂರು ಡಿಎಚ್ಒ ಡಾ.ಕೆ.ಎಚ್.ಪ್ರಸಾದ್, ಡಿಸಿಪಿ (ಸಂಚಾರ) ಗೀತಾ ಎಂ.ಎಸ್.ಐಪಿಎಸ್ ಮತ್ತು ಎನ್.ಎಚ್.ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಮತ್ತು ಚೀಫ್ ಹಾರ್ಟ್ ಸರ್ಜನ್ ಡಾ.ಎಂ.ಎನ್.ರವಿ, ಎಂಐಟಿಎಂ ಪ್ರಾಂಶುಪಾಲರು ಮತ್ತು ಎಂಇಟಿಯ ಸದಸ್ಯರು ಸಮಾರಂಭದ ಪ್ರಾರಂಭಿಕ ಹಂತದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ.

ಅಲ್ಲದೆ, ಉತ್ಸವದ ಕೊನೆಯ ದಿನ (ಶನಿವಾರ), ಪ್ರಸಿದ್ಧ ರಷ್ಯಾದ ನಟಿ, ರೂಪದರ್ಶಿ ಮತ್ತು ಡಿಜೆ ಜೂಲಿಯಾ ಬ್ಲಿಸ್ ಅವರ ಪ್ರದರ್ಶನವನ್ನು ಸಂಜೆ 7.30 ಕ್ಕೆ ಆಯೋಜಿಸಲಾಗಿದೆ.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

7 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

7 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

7 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

9 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago