Categories: ಮೈಸೂರು

ರಾಮಮಂದಿರ ರಾಜಕಾರಣ ಜೂಜಾಟದ ಕೇಂದ್ರ: ದೇವನೂರು ಮಹಾದೇವ

ಮೈಸೂರು: ದೇಶದ ಹಳ್ಳಿ ಹಳ್ಳಿಯಲ್ಲಿರುವ ರಾಮ ಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳು. ಈಗ  ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ರಾಜಕಾರಣದ ಜೂಜಾಟದ ಕೇಂದ್ರ ಎಂದು ಹಿರಿಯ  ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಸಹಯೋಗದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ಸಂಸ್ಥೆಯಲ್ಲಿ ನಡೆದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮ್ಮಟ 2ನೇ ದಿನದ ಗೋಷ್ಠಿಯಲ್ಲಿ ಮಾತನಾಡಿದ ಅವರು,  ಸನಾತನಕ್ಕೆ ಮೌಲ್ಯ ಇರುವಂತೆ ಅಪಮೌಲ್ಯಗಳಿವೆ. ಇಂದು ಮೌಲ್ಯ ಮತ್ತು ಅಪಮೌಲ್ಯದ ನಡುವೆ ಘರ್ಷಣೆ ನಡೆಯುತ್ತಿದೆ. ಅಪೂರ್ಣ ರಾಮ ಮಂದಿರ ಉದ್ಘಾಟನೆ ದೇಶದ ಮೆದುಳು ತಿನ್ನುತ್ತಿದೆ ಎಂದರು.

ಸನಾತನ ಹಿಂದಿನಿಂದ ಬಂದಿದ್ದು. ಅಂದರೆ ಅನಾದಿ. ಅತಿ ಆಸೆ ಗತಿಕೇಡು ಎಂಬ ಮಾತು ಸನಾತನವಾದದ್ದು. ಈ ಮಾತು  ಬುದ್ಧನಿಂದ ಬಂದಿದೆ. ಗರ್ವಭಂಗ ಇನ್ನೊಂದು ಮಾತು. ಇದು ಆಂಜನೇಯನನ್ನು ಅಲುಗಾಡಿಸಲಾಗದ ಭೀಮ, ಮಗನಿಂದಲೇ ಸೋತ ಅರ್ಜುನ ಇತ್ಯಾದಿ. ಹಾಗೇ ಹಿಂದೂ ಅನ್ನುವುದು ಸಹಜ. ಹಿಂದುತ್ವ ಎನ್ನುವುದು ನಾನತ್ವ ಎಂದು ಹೇಳಿದರು.

ರಾಮ ನ್ಯಾಯದ ಗಂಟೆ ಕಟ್ಟಿಸಿದ್ದ. ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಗಂಟೆ ಎಳೆದು ನ್ಯಾಯ ಕೇಳಬಹುದಿತ್ತು. ಈಗ  ಉದ್ಘಾಟನೆಯಾಗಲಿರುವ ದೇಗುಲದ 4 ದಿಕ್ಕಿನಲ್ಲೂ 4 ಗಂಟೆಗಳನ್ನು ಕಟ್ಟಿಸಬೇಕು. ಮಾತು ಕೊಟ್ಟವರು ಮಾತು ನಡೆಸೋದು ಮೌಲ್ಯ. ಮಾತನ್ನು ಕಾಲು ಕಸ ಮಾಡಬಾರದು ಎಂದು ತಿಳಿಸಿದರು.

ನಮ್ಮ ಪಿತೃಗಳಾದ ಆದಿವಾಸಿ ಸಮುದಾಯ ಎಚ್ಚರವಾಗಿದೆ. ಇವರು ತಮ್ಮ ದೇವರನ್ನು ಮೌಲ್ಯಮಾಪನ ಮಾಡುತ್ತಾರೆ.  ಮನುಷ್ಯರನ್ನು ಮೌಲ್ಯಮಾಪನ ಮಾಡದ ನಾವುಗಳು ಎಚ್ಚರ ಕಳೆದುಕೊಂಡಿದ್ದೇವೆ ಎಂದರು.

ಆದಿವಾಸಿಗಳು ಕೊಟ್ಟ ಮಾತು ತಪ್ಪಿದ, ಕಷ್ಟಕ್ಕೆ ಆಗದ ದೈವವನ್ನೇ ದೇಗುಲದಿಂದ ಆಚೆ ಹಾಕುತ್ತಾರೆ. ಪ್ಲೇಗ್ ಬಂದು ಪ್ರಾಣದ  ಹಂಗು ತೊರೆದು ಹೋರಾಡುವ ಡಾ.ಖಾನ್ ದೈವವಾಗಿ ಪೂಜಿಸಲ್ಪಡುತ್ತಾನೆ. ಆದಿವಾಸಿಗಳ ಈ ಬಳುವಳಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

2024ರ ನಿರ್ಣಾಯಕ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ಈಗ ಪಾರ್ಲಿಮೆಂಟ್ ಮೌಲ್ಯಮಾಪನ ಮಾಡಬೇಕು. ಹಾಲಿ  ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಿದರೆ ಶೇ.90 ಸದಸ್ಯರನ್ನು ಸಂಸತ್ತಿನಿಂದ ಹೊರಹಾಕಬೇಕಾಗುತ್ತದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಇದಾಗಬೇಕು ಎಂದರು.

2024ರ ಚುನಾವಣೆಗೂ ಮುನ್ನ ಉದ್ಯೋಗ, ಆರೋಗ್ಯ ಸಹಿತ ಎಲ್ಲವನ್ನೂ ಮೌಲ್ಯಮಾಪನ ಮಾಡಬೇಕು. ಏನನ್ನು  ಪೂರೈಸಿದರು ಏನನ್ನೂ ಪೂರೈಸಲಿಲ್ಲ ಚರ್ಚೆಯ ವಿಷಯಗಳಾಗಬೇಕು ಎಂದರು.

ಎರಡನೇ ದಿನದ 2ನೇ ಗೋಷ್ಠಿಯಲ್ಲಿ ಸಿದ್ದನಗೌಡ ಪಾಟೀಲ-ರಾಜಕೀಯ, ಮಾವಳ್ಳಿ ಶಂಕರ್- ದಲಿತ ಚಳವಳಿ, ಸಬಿಹಾ ಭೂಮಿಗೌಡ-ಮಹಿಳಾ ಚಳವಳಿ, ಬಡಗಲಪುರ ನಾಗೇಂದ್ರ-ರೈತ ಚಳವಳಿ ವಿಷಯ ಮಂಡಿಸಿದರು. ಬಂಜಗೆರೆ ಜಯಪ್ರಕಾಶ್ ಇದ್ದರು.

Ashika S

Recent Posts

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

11 seconds ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

12 mins ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

45 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

59 mins ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

1 hour ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

2 hours ago