Categories: ಮೈಸೂರು

ರೌಡಿ ಶೀಟರ್​ಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿ ವಾಪಸ್

ಮೈಸೂರು: ರೌಡಿ ಶೀಟರ್​ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಇದೀಗಾ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ‌ ಮುಂದಾಗಿದೆ. ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನ.1 ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂಪಡೆಯಲಾಗುತ್ತೆ ಎಂದು ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಅವರು ತಿಳಿಸಿದ್ದಾರೆ. ಕೊನೆ ಕ್ಷಣದಲ್ಲಿ ಪ್ರಶಸ್ತಿಗೆ ಹೆಸರು ಸೇರ್ಪಡೆಯಾಗಿತ್ತು‌. ಪೊಲೀಸರಿಂದ ಆತನ ಹಿನ್ನೆಲೆ, ಮಾಹಿತಿ ಪಡೆಯಲು ತಡವಾಯಿತು. ಇದೀಗಾ ಆತ ರೌಡಿ ಶೀಟರ್ ಎಂಬುದು ತಿಳಿದು ಬಂದಿದೆ. ಈ ಕಾರಣದಿಂದ ರೌಡಿ ಶೀಟರ್ ಅಶೋಕ್​ಗೆ ನೀಡಲಾಗಿದ್ದ ಪ್ರಶಸ್ತಿಯನ್ನ ವಾಪಸ್ಸು ಪಡೆಯಲಾಗುತ್ತೆ‌ ಎಂದು ತಿಳಿಸಿದ್ದಾರೆ.

Gayathri SG

Recent Posts

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕತ್ತೆ ಕಿರುಬ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕತ್ತೆ ಕಿರುಬ ( ಹೈನಾ ) ಶ್ವಾನ ಕಾಣಿಸಿಕೊಂಡಿದೆ.

7 mins ago

ಲೋಕಸಭಾ ಚುನಾವಣೆ : ಮತದಾರನಿಗೆ ಕಾಂಗ್ರೆಸ್​ ಶಾಸಕನಿಂದ ಕಪಾಳಮೋಕ್ಷ

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಶಾಸಕ ಎ ಶಿವಕುಮಾರ್ಮ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ…

15 mins ago

ಧರ್ಮ ಪಾಲನೆಯ ಅಸಡ್ಡೆಯೇ ಸಂಘರ್ಷಕ್ಕೆ ಕಾರಣ: ಪಿ.ಎ. ಹನೀಫ್

ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ,…

27 mins ago

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಚಿತ್ರದ ಶೀರ್ಷಿಕೆ ಅನಾವರಣ

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಶೀರ್ಷಿಕೆ ಅನಾವರಣ

29 mins ago

ಪುತ್ತೂರು ಶಾಸಕರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ.

49 mins ago

ಪ್ರವಾಸಕ್ಕೆ ಬಂದಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಮೃತ್ಯು

ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟ  ಘಟನೆ ಮೈಸೂರಿನ ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.

1 hour ago