Categories: ಮೈಸೂರು

ಕ್ಷೇತ್ರದ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಶಾಸಕ ದರ್ಶನ್‌ ಧ್ರುವನಾರಾಯಣ್

ನಂಜನಗೂಡು: ತಾಲ್ಲೂಕಿನ ಕೂಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸನಾಳ, ಬಾಗೂರು, ಕೂಡ್ಲಾಪುರ, ತರದಲೆ ಗ್ರಾಮಗಳಲ್ಲಿ ಮಂಗಳವಾರ ನೂತನ ಶಾಸಕ ದರ್ಶನ್‌ ಧ್ರುವ ನಾರಾಯಣ್‌ ಅವರು ಜನಸ್ಪಂದನಾ ಹಾಗೂ ಕೃತಜ್ಞತಾ ಸಭೆ ನಡೆಸಿದರು.

ಈ ವೇಳೆ ಗ್ರಾಮಗಳ ಎಲ್ಲ ಕಾಲೊನಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಭೇಟಿ ಕೊಟ್ಟು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.

ಹುಣಸನಾಳು ಗ್ರಾಮದಲ್ಲಿ ಭೇಟಿ ವೇಳೆ ಮಹಿಳೆಯರು ಹಾಗೂ ಗ್ರಾಮಸ್ಥರು, ಕುಡಿಯುವ ನೀರು, ರಸ್ತೆ ಸಮಸ್ಯೆ, ಸಮುದಾಯ ಭವನಗಳ ನಿರ್ಮಾಣ ಇನ್ನಿತರ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹಾರಕ್ಕೆ ಶಾಸಕರು ಸೂಚಿಸಿದರು.

ನಂತರ ಹುಣಸನಾಳು ಗ್ರಾಮದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್‌ ಅವರು, ಅತ್ಯಧಿಕ ಮತಗಳನ್ನು ನೀಡಿ ನನ್ನನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಿದರು.

ಶಾಸಕದ ನಂತರ ಒಂದು ಭಾಗದಿಂದ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗ್ರಾಮಗಳಲ್ಲಿ ಕಂಡು ಬರುವ ಜನರ ಮೂಲಭೂತ ಸಮಸ್ಯೆಗಳಿಗೆ ಹಂತ–ಹಂತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುರಟ್ಟಿ ಮಹೇಶ್, ಮುಖಂಡರಾದ ದೊರೆಸ್ವಾಮಿ ನಾಯಕ, ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಪ್ರದೀಪ್, ಕರಳಪುರ ನಾಗರಾಜು,ಶಿವಕುಮಾರ್, ಯುವ ಕಾಂಗ್ರೆಸ್ ನ ಅಧ್ಯಕ್ಷ ಅಶೋಕ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Sneha Gowda

Recent Posts

ಮೃಣಾಲ್ ಹೆಬ್ಬಾಳ್ಕರ್​ ಪರ ನೇಹಾ ತಂದೆ ಪ್ರಚಾರ; ನೆಟ್ಟಿಗರ ಆಕ್ರೋಶ

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

11 mins ago

ಇಂದು ಚಕ್ರವರ್ತಿ ಸೂಲಿಬೆಲೆ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗಿ

ತಾಲೂಕಿನ ಕರಜಗಿ ಗ್ರಾಮದಲ್ಲಿ ಇಂದು ಸಾಯಂಕಾಲ 6 ಗಂಟೆಗೆ ನಮೋ ಬ್ರಿಗೇಡ್ ವತಿಯಿಂದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಬಹಿರಂಗ…

17 mins ago

ಗನ್‌ ಪಾಯಿಂಟ್‌ ಇಟ್ಟು ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ !

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

28 mins ago

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ಇಬ್ಬರು ಸಾವು

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.

42 mins ago

ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ; ತಾಯಿ, ಮಗು ಸಾವು

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಆಕೆಯ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುವ ಅಘಾತಕಾರಿ…

58 mins ago

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣು

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್…

1 hour ago