Categories: ಮೈಸೂರು

ಜನವರಿಯಲ್ಲಿ  ಬ್ರ್ಯಾಂಡ್ ಮೈಸೂರು ಫೆಸ್ಟ್ ಆಚರಣೆಗೆ ಸಿದ್ಧತೆ

ಮೈಸೂರು: ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಪ್ರವಾಸೋದ್ಯಮ ಉತ್ತೇಜಿಸಲು ಜ.26ರಿಂದ 28ರವರೆಗೆ ಮೂರು ದಿನಗಳ ಕಾಲ ಬ್ರ್ಯಾಂಡ್ ಮೈಸೂರು ಫೆಸ್ಟ್ ಆಯೋಜಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮಗಳ ರೂಪುರೇಷೆಯನ್ನು ಅಂತಿಮಪಡಿಸಿ ಅಗತ್ಯವಿರುವ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚನೆ ನೀಡಿದ್ದಾರೆ.

ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ಅಂತಿಮವಾಗಿ ದಿನಾಂಕ ನಿರ್ಧರಿಸಲಾಯಿತು. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾತನಾಡಿ, ಮೈಸೂರು ಪ್ರವಾಸೋದ್ಯಮ ಉತ್ತೇಜಿಸಲು ಈಗಾಗಲೇ ಬ್ರ್ಯಾಂಡ್ ಮೈಸೂರು ಲೋಗೋ ಬಿಡುಗಡೆ ಮಾಡಲಾಗಿದೆ.

ಜ.26, 27 ಮತ್ತು 28ರಂದು ಮೂರು ದಿನಗಳ ಕಾಲ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ 50 ಲಕ್ಷ ರೂ ಅನುದಾನ ನೀಡಲಿದ್ದು, ಉಳಿದ ಅನುದಾನ ಒದಗಿಸಬೇಕಿದೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೂರು ದಿನಗಳ ಕಾಲ ಅದ್ಧೂರಿಯಾಗಿ ಮಾಡಬೇಕಾದರೆ 50ಲಕ್ಷ ಸಾಕಾಗುವುದಿಲ್ಲ. ಇಲಾಖೆಗೆ 50 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾಪ ಮಾಡಬೇಕು. ಪ್ರಾಯೋಜಕತ್ವದ ಮೂಲಕ ಒಂದು ಕೋಟಿ ರೂ. ಸಂಗ್ರಹಿಸಿ ಕಾರ್ಯಕ್ರಮ ರೂಪಿಸಬಹುದು ಎಂದು ಹೇಳಿದರು.

ಸ್ಥಳೀಯ ಕಲಾವಿದರ ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಯಿಸಬೇಕು. ಕಾರ್ಯಕ್ರಮಗಳ ಅಂತಿಮ ರೂಪುರೇಷೆ ಸಿದ್ಧವಾದ ಮೇಲೆ ಜನವರಿ ಮೊದಲ ವಾರ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಅಂತಿಮಗೊಳಿಸೋಣ ಎಂದು ಸಚಿವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ದಸರಾ ಮಹೋತ್ಸವ ಮಾದರಿಯಲ್ಲೇ ಖಾಸಗಿ ಪ್ರಾಯೋಜಕತ್ವ ಪಡೆಯಲು ಸಭೆ ನಡೆಸಲಾಗುವುದು. ಅನೇಕರು ಪ್ರಾಯೋಜಕತ್ವ ನೀಡಲಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಿದರೆ ಬ್ರ್ಯಾಂಡ್‌ನ್ನು ಪ್ರಚಾರಪಡಿಸಲಾಗದು. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆದಷ್ಟು ಪ್ರವಾಸಿಗರು ಬರಲಿದ್ದಾರೆ ಎಂದರು.

ಪ್ರಾಚ್ಯವಸ್ತು, ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಆಯುರ್ವೇದ ಇಲಾಖೆ ಉಪ ನಿರ್ದೇಶಕಿ ಪುಷ್ಪಾವತಿ, ಸಹಾಯಕ ನಿರ್ದೇಶಕ ಹರೀಶ್ ಮತ್ತಿತರರು ಹಾಜರಿದ್ದರು.

Ashika S

Recent Posts

ʼರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕುʼ

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

2 mins ago

ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಗಾನಿಸ್ತಾನ : 200ಕ್ಕೂ ಹೆಚ್ಚು ಜನ ಬಲಿ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…

21 mins ago

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

33 mins ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

43 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

1 hour ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

1 hour ago