Categories: ಮೈಸೂರು

ಮೇ 7ಕ್ಕೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಜಿಲ್ಲೆಗೆ ಆಗಮಿಸುತ್ತಿದ್ದು, ಮೇ 7ರಂದು ಬೃಹತ್ ಸಮಾವೇಶ ನಡೆಸಲಿದ್ದಾರೆ.

ಅಂದು ಸಂಜೆ 5ಗಂಟೆಗೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾ 766ರ ಸಮೀಪ ಇರುವ ಎಲಚೆಗೆರೆ ಗೇಟ್ ಬಳಿ ಸಮಾವೇಶ ನಡೆಯಲಿದ್ದು, ಸಮಾವೇಶ ನಡೆಯುವ ವೇದಿಕೆ, ಹೆಲಿಪ್ಯಾಡ್ ಹಾಗೂ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ, ಬಿಹಾರದ ರಾಜ್ಯಸಭಾ ಸದಸ್ಯ ವಿವೇಕ್ ಠಾಕೂರ್, ಎಂಎಲ್‌ಸಿ ಕೇಶವಪ್ರಸಾದ್, ಮೈ.ವಿ.ರವಿಶಂಕರ್, ಸುರೇಶ್ ಬಾಬು, ಡಾ.ಶಿವರಾಂ, ಡಾ.ಹರ್ಷವರ್ಧನ್, ಶ್ರೀನಿವಾಸ್ ರೆಡ್ಡಿ, ಸಂಜಯ್ ಶರ್ಮ ಉಪಸ್ಥಿತಿಯೊಂದಿಗೆ ಪೂರ್ವಬಾವಿ ಸಭೆ ನಡೆಯಿತು.

ಕಾರ್ಯಕ್ರಮ ನಡೆಯುವ ಸ್ಥಳವನ್ನು ಎಸ್‌ಪಿಜಿ ಯವರು ಪರಿಶೀಲಿಸಿ ಅಂತಿಮಗೊಳಿಸಿದರು.   ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಪೊಲೀಸ್, ಕಂದಾಯ, ಎಸ್.ಪಿ.ಜಿ ಯ ಅಧಿಕಾರಿಗಳು ಉಪಸ್ಥಿತರಿದ್ದರು.

Gayathri SG

Recent Posts

100 ವರ್ಷ ತುಂಬಿದ ಅಜ್ಜನಿಗೆ ಹುಟ್ಟುಹಬ್ಬದ ಸಂಭ್ರಮ

೧೦೦ ವರ್ಷ ತುಂಬಿದ ಅಜ್ಜನಿಗೆ ಇಡೀ ಕುಟುಂಬ, ಹಾಗೂ ಗ್ರಾಮದ ವತಿಯಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ ವಿಶೇಷ ಕಾರ್ಯಕ್ರಮ…

7 mins ago

ಖ್ಯಾತ ಗಾಯಕಿ ಅನನ್ಯಾ ಬಿರ್ಲಾ ಪೋಸ್ಟ್​ ನೋಡಿ ಅಭಿಮಾನಿಗಳು ಶಾಕ್​

ಆದಿತ್ಯ ಬಿರ್ಲಾ ಗ್ರೂಪ್‌ ಮುಖ್ಯಸ್ಥರಾದ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಅವರು ಅಭಿಮಾನಿಗಳಿಗೆ ಶಾಕಿಂಗ್​ ವಿಚಾರವೊಂದನ್ನು…

10 mins ago

ಮಲ್ಪೆ ಬಂದರಿನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸಿ: ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿರುವ ಅಗ್ನಿಶಾಮಕ ದಳದ 15 ವರ್ಷ ಹಿಂದಿನ ಎರಡು ವಾಹನಗಳನ್ನು ಸರ್ಕಾರ ಎರಡು ತಿಂಗಳ ಹಿಂದೆ ಸೇವೆಯಿಂದ…

25 mins ago

ಹುಟ್ಟೂರು ಕೆರಾಡಿಯಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ

ಕಾಂತಾರ’ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್‌ 1 ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ…

36 mins ago

ಮತದಾನದ ವಿಡಿಯೋ ಚಿತ್ರೀಕರಿಸಿದ ಬಿಜೆಪಿ ಅಭಿಮಾನಿ

ಮತಗಟ್ಟೆಯಲ್ಲಿ ಮತದಾರರೊಬ್ಬರು ಮತ ಹಾಕುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುರುವ ಘಟನೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

39 mins ago

ಲೋಕಸಭಾ ಚುನಾವಣೆ: ಹುಬ್ಬಳ್ಳಿ, ಧಾರವಾಡದಲ್ಲಿ ಬಿರುಸಿನ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆದಿದ್ದು ಹುಬ್ಬಳ್ಳಿಯಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರು ಕುಟುಂಬ…

48 mins ago