ಮೈಸೂರು

ನಂಜನಗೂಡು: ಮೃತಪಟ್ಟ ಹಸುವಿಗೆ ವಿಮೆ ನೀಡುವಂತೆ ಮಹಿಳೆಯ ರೋಧನೆ

ನಂಜನಗೂಡು: ಹಸುವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಹೈನುಗಾರಿಕೆ. ಈಕೆಯ ಮೂಲ ಆಧಾರ ಸ್ಥಂಭವಾಗಿತ್ತು. ಆದರೆ, ಖಾಯಿಲೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಹಸುವೊಂದು ಮೃತಪಟ್ಟಿದೆ. ಮೃತಪಟ್ಟ ಹಸುವಿಗೆ ವಿಮೆ ನೀಡಬೇಕು ಎಂದು ಮಹಿಳೆಯೊಬ್ಬಳು ಒತ್ತಾಯ ಮಾಡಿದ್ದಾಳೆ.

ನಂಜನಗೂಡು ತಾಲೂಕಿನ ದೇವರಾಯಶೆಟ್ಟಿಪುರ ಗ್ರಾಮದ ರಾಣಿ ಎಂಬ ಮಹಿಳೆಯೂ ಸಾಲ ಸೋಲ ಮಾಡಿ ಎರಡು ಹಸುಗಳನ್ನು ಖರೀದಿ ಮಾಡಿದ್ದರು.

ದೇವರಾಯಶೆಟ್ಟಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಿಂದ ಹಸುವಿಗೆ 30 ಸಾವಿರ ವಿಮೆಯನ್ನು ಕೂಡ ಮಾಡಿಸಲಾಗಿತ್ತು. ಹಾಗೂ ವಿಮೆ ಮಾಡಿಸಿದ ಹಸುವಿನ ಕಿವಿಗೆ ಓಲೆ ಹಾಕಲಾಗಿತ್ತು. ಹಸುವಿಗೆ ಓಲೆ ಹಾಕಿದ ಪರಿಣಾಮ ಕಿವಿ ನೋವಾದ ಹಿನ್ನೆಲೆಯಲ್ಲಿ ಓಲೆಯನ್ನು ತೆಗೆದು ಹಾಕಿದ್ದರು.

ಅನಾರೋಗ್ಯ ಕಾರಣದಿಂದಾಗಿ ಹಸು ಮೃತಪಟ್ಟಿದೆ ಎನ್ನಲಾಗಿದ್ದು. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿ, ನ್ಯಾಷನಲ್ ಇನ್ಸೂರೆನ್ಸ್ ಕಂಪನಿಗೆ ವರದಿಯನ್ನು ಕಳುಹಿಸಿದ್ದಾರೆ. ಹಸು ಸಾವನ್ನಪ್ಪಿ, ನಾಲ್ಕು ತಿಂಗಳು ಕಳೆದರೂ ವಿಮೆ ವಾಪಸ್ ಬಂದಿಲ್ಲ. ಹಸುವಿನ ಕಿವಿಯಲ್ಲಿ ಓಲೆ ಇಲ್ಲ. ಹಸು ನಿಮ್ಮದಲ್ಲ ಆದ್ದರಿಂದ ವಿಮೆ ಬರುವುದಿಲ್ಲ ಎಂದು ಡಾ. ನಿರಂಜನ್ ಹೇಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ವಿಮೆಯನ್ನು ಇನ್ಸೂರೆನ್ಸ್ ಕಂಪನಿಯವರು ನೀಡುತ್ತಿಲ್ಲ. ವಿಮೆ ನೀಡಿದರೆ ಇನ್ನೊಂದು ಹಸುವನ್ನು ತೆಗೆದುಕೊಂಡು ಜೀವನ ಸಾಗಿಸುತ್ತಿದ್ದೆವು. ನಮ್ಮ ಹಣವನ್ನು ನೀಡದೆ ಕಂಪನಿಯವರು ರೈತರಿಗೆ ವಂಚನೆ ಮಾಡುತ್ತಿದ್ದಾರೆ. ನಾವು ಹಸುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಇದರಲ್ಲಿ ಬರುವ ಆದಾಯದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ನಮ್ಮ ಬದುಕು ಬೀದಿ ಪಾಲಾಗಿದೆ. ದಯವಿಟ್ಟು ನನಗೆ ವಿಮೆ ಹಣವನ್ನು ಕೊಡಿಸಿ ಎಂದು ಮಹಿಳೆ ಅಂಗಲಾಚಿ ಬೇಡಿಕೊಂಡಿದ್ದಾಳೆ.

ಹಸುಗಳಿಗೆ ರೂ.30 ಸಾವಿರ ಇನ್ಸೂರೆನ್ಸ್ ಮಾಡಿಸಿದರೆ, ನಮ್ಮ ಅಕೌಂಟಿಗೆ ಬರುವುದು 20 ರಿಂದ 25 ಸಾವಿರ ಮಾತ್ರ ಉಳಿಕೆ ಹಣವನ್ನು ನೀಡದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಮದಲ್ಲಿ ರೈತರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇಂತಹ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

3 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

3 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

3 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

3 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

4 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

4 hours ago