News Karnataka Kannada
Friday, April 19 2024
Cricket
ಮೈಸೂರು

ನಂಜನಗೂಡು: ಚುಂಚನಹಳ್ಳಿ ಗ್ರಾಮದ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ

Nanjangud: Exotic birds spotted in a lake in Chunchanahalli village
Photo Credit : News Kannada

ನಂಜನಗೂಡು: ಮಲೇಶಿಯಾ, ಚೀನಾ, ಶ್ರೀಲಂಕಾ, ಬಾಂಗ್ಲಾ, ನೇಪಾಳ ದೇಶದ ಕೆರೆಗಳಲ್ಲಿ ಕಾಣುತ್ತಿದ್ದ ಬಣ್ಣದ ಕೊಕ್ಕರೆ ಮತ್ತು ದಕ್ಷಿಣ ಯುರೋಪ್, ಏಷಿಯಾ ಆಫ್ರಿಕಾ ದೇಶದ ಬೂದು ಕೊಕ್ಕರೆ ಈಗ ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಚುಂಚನಹಳ್ಳಿ ಗ್ರಾಮದ ಕೆರೆಗೆ ಆಗಮಿಸಿದೆ.

ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಬಳಿ ಇರು ಕೆರೆಗೆ ವಿದೇಶಿ ಪಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಿಳಿ, ಕಪ್ಪು, ಕೇಸರಿ, ಗುಲಾಬಿ ಬಣ್ಣವಿರುವ ಅಪರೂಪದ ಕೊಕ್ಕರೆಗಳು ಕಾಣುತ್ತಿದ್ದು, ನಿಂತ ಹದ್ದಿನಷ್ಟು ಎತ್ತರವಿರುವ ದೊಡ್ಡ ಹಕ್ಕಿ, ಸದಾ ಚಟುವಟಿಕೆಯಿಂದ ಇವು ಇರಲಿವೆ.

ಗುಲಾಬಿ ಕೊಕ್ಕರೆಯ ಕುತ್ತಿಗೆಯಲ್ಲಿ ದಟ್ಟ ಪರ್ಪಲ್‌ ಬಣ್ಣದ ಗೆರೆ ಇದೆ. ಆಕಾರದಲ್ಲಿ ಪರ್ಪಲ್‌ ಹೆರಾನ್‌ ಚಿಕ್ಕದು, ಗೋಲತ್‌ ಹೆರಾನ್‌ ದೊಡ್ಡದು. ಬಣ್ಣದ ಕೊಕ್ಕರೆಯ ರೆಕ್ಕೆಯ ಅಂಚಿನಲ್ಲಿ ಕಪ್ಪು ಬಣ್ಣದ ಚಿತ್ತಾರವಿದೆ.

ಹೊಟ್ಟೆ ಎರಡೂ ಪಾಶ್ರ್ವಗಳಲ್ಲಿ ಕಪ್ಪು ವರ್ಣದ ದಪ್ಪರೇಖೆ ಹಿಂದಿನ ಪುಕ್ಕದವರೆಗೆ ಚಾಚಿದೆ. ಆದರೆ ಬಣ್ಣದ ಕೊಕ್ಕರೆಯ ಕುತ್ತಿಗೆ ಬೆಳ್ಳಗಿದೆ ಕುತ್ತಿಗೆ ಬುಡ, ಉಕ್ಕದ ತುದಿಯಲ್ಲಿ ಗುಲಾಬಿ ಬಣ್ಣವಿದೆ. ರೆಕ್ಕೆಯ ಅಂಚಿನಲ್ಲಿ ಗರಿಗಳಿವೆ. ಮುಖ ಕೇಸರಿ ಬಣ್ಣದಿಂದ ಕೂಡಿದೆ. ಚುಂಚು ಹಳದಿ ಬಣ್ಣ ಇದ್ದು, ತುಟ್ಟತುದಿಯಲ್ಲಿ ಕೆಳಮುಖವಾಗಿ ಬಾಗಿದೆ. ಕೊಕ್ಕರೆಯ ಕಾಲುಗಳು ಸುಮಾರು 60 ಸೆಂಮೀ ದಷ್ಟಿವೆ. ಉದ್ದದ ಬೆರಳುಗಳಿವೆ. ಹಿಂದಿನ ಬೆರಳು ಸುಮಾರು 9 ಸೆಂಮೀ ನಷ್ಟು ಚಿಕ್ಕದು ಇರುತ್ತದೆ.

ಪಶ್ಚಿಮ ಕರಾವಳಿಯ ಕಾಂಡ್ಲಾ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಬೂದು ಕೊಕ್ಕರೆ, ಸುಮಾರು 63 ಸೆಂ.ಮೀ. ಉದ್ದ ಇರುತ್ತದೆ. ದಕ್ಷಿಣ ಯುರೋಪ್‌, ಏಷಿಯಾ, ಆಫ್ರಿಕಾಗಳಲ್ಲೂ ಇದು ಕಾಣಸಿಗುತ್ತದೆ. ಕೊಕ್ಕರೆಯ ಚುಂಚು, ಕಪ್ಪು ಮಿಶ್ರಿತ ಬೂದು ಬಣ್ಣ. ಕಾಲು ಸಹ ಕಪ್ಪಾಗಿದೆ. ಬೂದು ಬಣ್ಣದ ಕೊಕ್ಕರೆಯು ಕಡಿಮೆ ನೀರಿರುವ ಜಾಗದಲ್ಲಿ ಕಾದು ಕುಳಿತು -ಇಲ್ಲವೇ ಓಡಾಡುತ್ತಾ ಬೇಟೆಯಾಡಿ, ತನ್ನ ಆಹಾರ ಗಿಟ್ಟಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಬಿಳಿ ಕೊಕ್ಕರೆ, ಬೂದು ಬಣ್ಣದ ಕೊಕ್ಕರೆ ಹಳದಿ ಚುಂಚಿನ ಕೊಕ್ಕರೆಗಳು ಒಂದೇ ರೀತಿ ಕಾಣಬಹುದು. ಇವೆಲ್ಲಾ ಸಿಹಿನೀರಿನ ಕೊಳ -ಸರೋವರ ನದಿ ಪ್ರದೇಶದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಚುಂಚನಹಳ್ಳಿ ಕೆರೆಗೆ ವಲಸೆ ಬಂದಿವೆ. ಕೆರೆಯಲ್ಲಿ ಮೀನು ಏಡಿ ಇದರ ಮುಖ್ಯ ಆಹಾರವಾಗಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ವಿದೇಶಿ ಪಕ್ಷಿಗಳು ವಾಸಿಸುತ್ತಿವೆ. ಕೆರೆಯನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ತಾಣವನ್ನಾಗಿ ಮಾಡಬಹುದೆಂದು ಸ್ಥಳೀಯರ ಅಭಿಪ್ರಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು