News Karnataka Kannada
Sunday, April 14 2024
Cricket
ಮೈಸೂರು

ನಂಜನಗೂಡು: ಸಿ.ಎಂ ಕ್ಷೇತ್ರದ ಅಂಚೆ ಕಛೇರಿಯಲ್ಲಿ ಲಂಚಾವತಾರ!

Nanjangud: Bribery at cm's post office
Photo Credit : News Kannada

ನಂಜನಗೂಡು: ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಅಂಚೆ ಕಛೇರಿಯಲ್ಲಿ ಲಂಚ ಕೊಟ್ಟರಷ್ಟೇ ಫಲಾನುಭವಿಗಳಿಗೆ ಪಿಂಚಣಿ ಹಣ ನೀಡುತ್ತಿದ್ದಾರೆ ಎಂದು ವೃದ್ಧರು, ವಿಧವೆಯರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡಿನ ಚುಂಚನಹಳ್ಳಿ ಗ್ರಾಮದ ಭಾರತೀಯ ಅಂಚೆ ಕಛೇರಿಯಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಚುಂಚನಹಳ್ಳಿ ಅಂಚೆ ಕಛೇರಿ ಪಿನ್ ಕೋಡ್ 571 119 ಆಗಿದ್ದು, ಚುಂಚನಹಳ್ಳಿ, ಹನುಮನಪುರ, ವರಹಳ್ಳಿ, ಕಕ್ಕರಹಟ್ಟಿ ಗ್ರಾಮಗಳು ಈ ಅಂಚೆ ಕಛೇರಿ ವ್ಯಾಪ್ತಿಗೆ ಬರುತ್ತವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಿಶೇಷ ಚೇತನರು, ವೃದ್ಧರು, ವಿಧವೆಯರು, ಅಂಗವಿಕಲರಿಗೆ ಜೀವನೋಪಾಯಕ್ಕಾಗಿ ನೀಡುವ ಮನಸ್ವಿ ಯೋಜನೆ, ಮೈತ್ರಿ ಯೋಜನೆ, ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ವೇತನದಲ್ಲಿ ಫಲಾನುಭವಿಗಳು ಲಂಚ ಕೊಟ್ಟರೆ ಪಿಂಚಣಿ ಹಣವನ್ನು ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಪುಟ್ಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧವೆ, ಅಂಗವಿಕಲರು ಹಾಗೂ ವೃದ್ಧರಿಗೆ ನೀಡುವ ಹಣದಲ್ಲಿ ಐವತ್ತರಿಂದ ನೂರು ರೂಪಾಯಿ ತನಕ ಹಿಡಿದುಕೊಂಡು ಕೊಡುತ್ತಾರೆ. ನಮಗಾಗಿ ಕೊಡುವ ಹಣವನ್ನು ಹಿಡಿಯಲು ಇವರು ಯಾರು.? ಪೋಸ್ಟ್ ಮ್ಯಾನ್ ಮನೆಗಳಿಗೆ ಬಂದು ಕೊಡಬೇಕು ಆದರೆ, ಇಲ್ಲಿಯ ಮನೆಗಳಿಗೆ ಬಂದು ಕೊಡುವುದಿಲ್ಲ, ವಯಸ್ಸಾದ ವೃದ್ಧರು, ಅಕ್ಕಪಕ್ಕದ ಗ್ರಾಮಸ್ಥರು ಅಂಚೆ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಗದಿತ ಸಮಯಕ್ಕೆ ಅಂಚೆ ಕಛೇರಿ ಬಾಗಿಲು ತೆರೆಯುದಿಲ್ಲ. ತಿಂಗಳಿಗೆ ಪಿಂಚಣಿ ಹಣ ಬಂದಿದ್ದರೂ ಕೂಡ ಸರಿಯಾಗಿ ವಿತರಣೆ ಮಾಡುತ್ತಿಲ್ಲ, 800 ಬಂದರೆ 50 ರೂ. ಹಿಡಿದುಕೊಂಡು ಕೊಡುತ್ತಾರೆ, 1.400 ಬಂದರೆ 100 ರೂಪಾಯಿ ತೆಗೆದು ಕೊಳ್ಳುತ್ತಾರೆ. 2 ಸಾವಿರ ಬಂದರೆ 200 ರೂಪಾಯಿ ತೆಗೆದುಕೊಂಡು ಇನ್ನುಳಿದ ಹಣವನ್ನು ನೀಡುತ್ತಾರೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಈ ಪಿಂಚಣಿ ಹಣವನ್ನು ನಂಬಿಕೊಂಡು ನಾವು ಜೀವನ ಸಾಗಿಸುತ್ತೇವೆ. ಸರ್ಕಾರ ಕೊಡುವ ಹಣದಲ್ಲೂ ಇವರು ಈ ರೀತಿ ಮಾಡಿದರೆ ನಾವು ಬದುಕುವುದಾದರೂ ಹೇಗೆ ಎಂದು ವೃದ್ದ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೂಡಲೇ ಇಂತಹ ಭ್ರಷ್ಟ ಪೋಸ್ಟ್ ಮಾಸ್ಟರ್ ಬದಲಾವಣೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು