Categories: ಮೈಸೂರು

ಮೈಸೂರು: ನಾಗರಹೊಳೆಯಲ್ಲಿ ಮೃತಪಟ್ಟ ಹುಲಿಯ ಮೂರು ಮರಿಗಳು ಸುರಕ್ಷಿತ

ಮೈಸೂರು: ಜಿಲ್ಲೆಯ ನಾಗರಹೊಳೆ ಉದ್ಯಾನವನದ ಅಂತರಸಂತೆಯಲ್ಲಿ ಮೃತಪಟ್ಟ ಹುಲಿಯ ಮೂರು ಹುಲಿ ಮರಿಗಳು ಸುರಕ್ಷಿತವಾಗಿವೆ  ಎಂದು ಕ್ಯಾಮೆರಾಗಳ ಮೂಲಕ ತಿಳಿದು ಬಂದಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವನ್ಯಜೀವಿ ವಲಯಕ್ಕೆ ಒಳಪಡುವ ತಾರಕ ಹೊಳೆ ಪ್ರದೇಶದಲ್ಲಿ ಕಳೆದ ಎರಡು ತಿಂಗಳುಗಳಿಂದ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ತಿರುಗಾಡುತ್ತಿರುವುದು ಕಂಡುಬಂದಿದೆ.

ನವೆಂಬರ್ 12 ರಂದು ತಾರಕಾ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ತಾಯಿ ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಾಗರಹೊಳೆ ನಿರ್ದೇಶಕ ಹರ್ಷಕುಮಾರ ನರಗುಂದ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 130 ಸಿಬ್ಬಂದಿ, 4 ಸಾಕು ಆನೆಗಳು, 30 ಟ್ರ್ಯಾಪಿಂಗ್ ಕ್ಯಾಮೆರಾಗಳು ಮತ್ತು 2 ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

Ashika S

Recent Posts

ಎಂಜಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ರಾಜಧಾನಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಪಿಇಎಸ್ ಯೂನಿವರ್ಸಿಟಿಯಲ್ಲಿ ಎಂಜಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

1 min ago

ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ಭಾರತೀಯ ಮೂಲದ 66ವರ್ಷದ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಾಯುವ್ಯ ಲಂಡನ್‌ ನ ಬಸ್‌ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ…

1 min ago

ಯುವ ನವದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಯುವ ನವ ದಂಪತಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

33 mins ago

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಾಯಿ ನಿಧನ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ದೆಹಲಿ ಏಮ್ಸ್‌ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ…

43 mins ago

ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಾದ ಕ್ರಮವಲ್ಲ ಎಂದ ಸುಪ್ರೀಂ

ನ್ಯೂಸ್‌ ಕ್ಲಿಕ್‌ ಸುದ್ಧಿ ತಾಣದ ಸಂಸ್ಥಾಪಕರಾದ ಪ್ರಬೀರ್ ಪುರಕಾಯಸ್ಥ ಅವರನ್ನು ‘ಅಕ್ರಮ ಚಟುವಟಿಕೆ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು…

49 mins ago

ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರು ಚಪ್ಪಲಿನಲ್ಲಿ ಹೊಡೆದಾಟ

ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ…

53 mins ago