Categories: ಮೈಸೂರು

ಮೈಸೂರು: ಅಭ್ಯರ್ಥಿ ಸಿದ್ದೇಗೌಡ ಆರೋಪಗಳಲ್ಲಿ ಹುರುಳಿಲ್ಲ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ಅವರ ಪರವಾಗಿ ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನನ್ನ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ.ಮರಿಗೌಡ ತಿರುಗೇಟು ನೀಡಿದ್ದಾರೆ.

ಮಾವಿನಹಳ್ಳಿ ಸಿದ್ದೇಗೌಡ ಮಾಡಿರುವ ಆರೋಪಕ್ಕೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಸಿದ್ದೇಗೌಡರಿಗೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಗೊತ್ತಿಲ್ಲ. ನಾವು ಈಗಲೂ ಸಿದ್ದೇಗೌಡರು ಗೆಲ್ಲುತ್ತಾರೆ ಎಂಬ ಭರವಸೆಯಲ್ಲಿದ್ದೇವೆ ಎಂದರು.

ನಮ್ಮ ನಾಯಕರಾದ ಸಿದ್ದರಾಮಯ್ಯನವರ ಮಾತಿನಂತೆ ಎಲ್ಲರೂ ಒಗ್ಗಟ್ಟಿನಿಂದ ಸಿದ್ದೇಗೌಡ ಪರವಾಗಿ 40 ದಿನಗಳ ಕಾಲ ಕೆಲಸ ಮಾಡಿದ್ದೇವೆ. ಕೊನೆಯ 4 ದಿನ ಅಭ್ಯರ್ಥಿ ಕಾಣೆಯಾಗಿದ್ದಾರೆ ಎಂದು ಕಾರ್ಯಕರ್ತರು ಕಸಿವಿಸಿಗೊಂಡಿದ್ದರು. ಇವರು ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ಚುನಾವಣೆ ಎದುರಿಸಲು ಹಣದ ಕೊರತೆಯಾಗಿದ್ದರೆ ಜನರ ಬಳಿಯೇ ಸತ್ಯ ಹೇಳಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ದೂರುತ್ತಿರುವುದು ತಪ್ಪು ಎಂದು ಹೇಳಿದರು. ಈ ರೀತಿ ಚುನಾವಣಾ ಫಲಿತಾಂಶ ಹೊರಬೀಳುವ ಮೊದಲೇ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ ಎಂದರು.

ಇನ್ನು ಇಲವಾಲ ಹೋಬಳಿ ಹೊಸ ಕಾಮನ ಕೊಪ್ಪಲಿನ ಲಕ್ಷ್ಮೀದೇವಮ್ಮ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿ ಆಗಲೆಂದು ಪೂರ್ಣಾಹುತಿ ಹೋಮದ ಪೂಜೆಯನ್ನು ಸ್ವಾಮಿ ಅವರ ನೇತೃತ್ವದಲ್ಲಿ ಮರೀಗೌಡರ ಮುಂದಾಳತ್ವದಲ್ಲಿ ಏರ್ಪಡಿಸಲಾಗಿತ್ತು.

Sneha Gowda

Recent Posts

ಸಂತ್ರಸ್ತೆ ಅಪಹರಣ ಕೇಸ್‌ : ಭವಾನಿ ರೇವಣ್ಣ ಸಂಬಂಧಿ ಬಂಧನ

ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅಲ್ಲದೇ ಅವರ ತಂದೆ ಸಚಿವ ಹೆಚ್​ಡಿ…

13 mins ago

ಭಾರೀ ಮಳೆ: ಮಣ್ಣಿನ ಕುಸಿತದಿಂದ 37 ಮಂದಿ ಮೃತ್ಯು, 74 ಕ್ಕೂ ಹೆಚ್ಚು ಜನ ಕಾಣೆ

ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆ ಮತ್ತು ಮಣ್ಣಿನ ಕುಸಿತದಿಂದಾಗಿ 37 ಮಂದಿ ಸಾವಿಗೀಡಾಗಿದ್ದಾರೆ.…

24 mins ago

ಆಫ್ರಿಕಾದಲ್ಲಿ ಮಳೆಯಿಂದ ಬಾರಿ ಪ್ರವಾಹ : 350ಕ್ಕೂ ಹೆಚ್ಚು ಸಾವು, 90 ಜನರು ನಾಪತ್ತೆ

ಕೀನ್ಯಾ ಮತ್ತು ತಂಜಾನಿಯಾದಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ನದಿಯಂತಾಗಿವೆ. ಮನೆಯಲ್ಲಿ ನಗುಗ್ಗಿದ ನೀರು ಮನೆ…

40 mins ago

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ : ವಿಡಿಯೋ ವೈರಲ್‌

ಕಜಕೀಸ್ತಾನದ  ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.

55 mins ago

ಸಿಲಿಂಡರ್‌ ಬ್ಲಾಸ್ಟ್‌ನಿಂದ ಮನೆಯಲ್ಲಿ ಬೆಂಕಿ : 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ

ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ…

1 hour ago

ಬೀದರ್‌ನ ’14 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ' ಎಂದು ನೀಟ್‌ ಸಂಯೋಜಕ…

1 hour ago