Categories: ಮೈಸೂರು

ಮೈಸೂರು:  ಸದೃಢ ರಾಷ್ಟ್ರ ನಿರ್ಮಾಣಕ್ಕೆ ದಾದಿಯರ ಕೊಡುಗೆ

ಮೈಸೂರು: ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ದಾದಿಯರ ಕೊಡುಗೆ ಅನನ್ಯವಾಗಿದೆ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಯ ಜತೆಗೆ ನಿರಂತರವಾಗಿದ್ದು, ಉಪಚಾರ ಮಾಡುವ ಮೂಲಕ ರೋಗ ಗುಣಪಡಿಸುತ್ತಾರೆ. ಅವರ ಸೇವೆ ಕಾಯಂಗೊಳಿಸಿ, ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದ್ದು, ಇದರತ್ತ ಲಕ್ಷವಹಿಸಬೇಕಾಗಿದೆ ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೇಳಿದರು.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸ್ಪಂದನ ಆಸ್ಪತ್ರೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ಕೇಕ್ ಕತ್ತರಿಸಿ ಆನಂತರ ಆಸ್ಪತ್ರೆಯ ಎಲ್ಲಾ ದಾದಿಯರನ್ನು ಗೌರವಿಸಿ ಮಾತನಾಡಿದ ಅವರು, ದಾದಿಯರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದೆ. ಪ್ರತಿ ವರ್ಷ ಮೇ-೧೨ನ್ನು ವಿಶ್ವ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸ್ಮರಿಸುವ ಉದ್ದೇಶವಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಇದಾಗಿದ್ದು, ಅವರು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಬುನಾದಿ ಹಾಕಿ ಸಂಘಟನೆ ಮಾಡಿದ್ದಾರೆ. ನೈಟಿಂಗೇಲ್ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಶಿವಕುಮಾರ್, ರಂಜಿತಾ, ರಾಜಮ್ಮ, ಭೂಮಿಕಾ, ಸ್ಮಿತಾ, ಶಿಲ್ಪಾ.ಜಿ.ಎಸ್, ಸುಮಾ ಅವರಿಗೆ ಕೇಂದ್ರದಲ್ಲಿ ಸತ್ಕರಿಸಿ, ಶುಭಾಷಯ ಕೋರಲಾಯಿತು.

ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವೈದ್ಯರಾದ ಡಾ.ನಿವೇದಿತಾ, ರಶ್ಮಿ, ಸುರೇಶ್, ರಾಜೀವ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Sneha Gowda

Recent Posts

ಕೋಮುವಾದಿ ಯತ್ನಾಳ ಶಾಸಕನಾಗಿರಲು ನಾಲಾಯಕ್: ಖಂಡ್ರೆ ವಾಗ್ದಾಳಿ

ಯಾವುದೇ ರಾಗ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುವುದಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಶಾಸಕನಾಗಿ, ಈಗ ಒಂದು ಕೋಮಿನ ಬಗ್ಗೆ…

1 min ago

ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ?: ಶಾಸಕ ರಾಜು ಕಾಗೆ

ಮೋದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ರಾಜು…

15 mins ago

ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್‌ ಗೆ ಬಾಂಬ್ ಬೆದರಿಕೆ : ಶಾಲಾ ಆವರಣದಲ್ಲಿ ಶೋಧಕಾರ್ಯ

ದೆಹಲಿಯ ದ್ವಾರಕದಲ್ಲಿರುವ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

31 mins ago

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್‌ : ಐವರು ಮೃತ್ಯು, 45 ಮಂದಿಗೆ ಗಾಯ

ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿರುವ ಘಟನೆ ಸೇಲಂ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

47 mins ago

ಹಾಸನ ವಿಡಿಯೋ ಕೇಸ್ ಪ್ರಕರಣ: ಅನ್ಯಾಯ ಯಾರಿಗೆ ಆದರೂ ಅದು ಅನ್ಯಾಯವೇ ಎಂದ ಎಸ್. ನಾರಾಯಣ್

ಹಾಸನದ ವಿಡಿಯೋ ಕೇಸ್ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ‌. ಅದರ ಬಗ್ಗೆ ನಾವು ಮಾತನಾಡದೇ…

1 hour ago

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 19 ರೂ. ಇಳಿಕೆ

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ 19 ರೂ. ಇಳಿಕೆ ಮಾಡಲಾಗಿದೆ.

1 hour ago