News Karnataka Kannada
Sunday, April 14 2024
Cricket
ಮೈಸೂರು

ಮೈಸೂರು: ಸ್ವಚ್ಚತಾ ಕಾರ್ಮಿಕರು, ಮುಸ್ಲಿಂ ಬಾಂಧವರಿಂದ ಗುರು ಪೂರ್ಣಿಮೆ

Mysuru: Swachhta workers, Muslim brethren celebrate Guru Purnima
Photo Credit : News Kannada

ಮೈಸೂರು: ಮೈಸೂರಿನ ಸ್ವರ್ಣ ನರಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪರಮಪೂಜ್ಯ ಶ್ರೀ ವೇಂಕಟಾಚಲ ಅವಧೂತ ಗುರು ಮಹಾರಾಜರ ದಿವ್ಯ ಸಾನ್ನಿಧ್ಯ, ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರು ಮಹಾರಾಜರ ಉಪಸ್ಥಿತಿಯಲ್ಲಿ ಮೈಸೂರಿನ ಹೊರವಲಯ ಬನ್ನೂರು ರಸ್ತೆಯಲ್ಲಿರುವ ಆರ್.ಆರ್.ವೆಡ್ಡಿಂಗ್ ಬೆಲ್ಸ್ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಅದೇ ಕಲ್ಯಾಣ ಮಂಟಪದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಚ್ಚತಾ ಕಾರ್ಮಿಕರು ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ಮುಸ್ಲಿಂ ಸಂಗೀತ ಕಲಾವಿದರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಗುರುವಿಗೆ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು.

ಮುಂಜಾನೆ 6 ಗಂಟೆಯಿಂದ ವ್ಯಾಸ ಪೂಜೆ , ಕಾಕಡಾರತಿ ,ಗಣಪತಿ ಹೋಮ , ಸುದರ್ಶನ ಹೋಮ , ದಕ್ಷಿಣಾ ಮೂರ್ತಿ ಹೋಮ, ದತ್ತಾತ್ರೇಯ ಹೋಮ, ಪಾದುಕಾ ಪೂಜೆ, ಸುವಾಸಿನಿ ಪೂಜೆ, ಕುಮಾರಿ ಪೂಜೆ, ಪೂರ್ಣಾಹುತಿ ನೆರವೇರಿಸಲಾಯಿತು. ನಂತರ ಸುಮಂಗಲೆಯರಿಗೆ ಗುರುಗಳು ಪಾದಪೂಜೆ ಮಾಡಿದರು, ಭಾಗವಹಿಸಿದ್ದ ಎಲ್ಲಾ ಭಕ್ತರಿಂದ ದತ್ತಾತ್ರೇಯ ಸ್ವಾಮಿಗೆ ಅಭಿಷೇಕ ಮತ್ತು ಪಾದುಕ ಪೂಜೆ ಮಾಡಿಸಲಾಯಿತು. ಗುರುಗಳು ಮಾತೃಶ್ರೀ ಅಮ್ಮನವರಿಗೆ ಪಾದಪೂಜೆ ನೆರವೇರಿಸಿದರು.

ಆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಅರ್ಜುನ ಅವಧೂತರು ಆಶೀರ್ವಚನ ನೀಡಿ ಗುರು ಪೂರ್ಣಿಮೆ ಮತ್ತು ದೇಶದ ಧಾರ್ಮಿಕ ಪರಂಪರೆ ಬಗ್ಗೆ ತಿಳಿಸಿದರಲ್ಲದೆ, ನೆರದಿದ್ದ ಸಾವಿರಾರೂ ಗುರು ಭಕ್ತರಿಂದ ಭಿಕ್ಷಾ ವಂದನೆ ಸ್ವೀಕರಿಸಿ ಆಶೀರ್ವಾದ ಮಾಡಿದರು.

ಶಿವಮೊಗ್ಗದ ಹೊಸನಗರ , ಮೂಲೆ ಗದ್ದೆಯ ಸದಾಶಿವ ಆಶ್ರಮದ ಪರಮಪೂಜ್ಯ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡಿ ಅವಧೂತ ಪರಂಪರೆ ಮತ್ತು ಗುರು ಬಾಂಧವ್ಯದ ಬಗ್ಗೆ ತಿಳಿಸಿ ಮೈಸೂರಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದ ನಮಗೆ ಅರ್ಜುನ ಅವಧೂತ ರಂತಹ ಗುರು ಮನೆ ಸಿಕ್ಕಿರುವುದು ನಮ್ಮ ಸುಧೈವ ಎಂದರು.

ಇದೇ ವೇಳೆ ವಿದ್ಯಾನಂದಶ್ರೀ ಫಲಾನುಭವಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ವಿತರಣೆ ಮಾಡಲಾಯಿತು .ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಎಲ್ಲಾ ಸದ್ಬಕ್ತರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಚಲನಚಿತ್ರ ಮತ್ತು ಕಿರುತೆರೆ ನಟ-ನಟಿಯರು , ರಾಜಕೀಯ ಗಣ್ಯರು ಪಾಲ್ಗೊಂಡು ಗುರುಗಳ ಮತ್ತು ದತ್ತಾತ್ರೇಯ ಅವರ ಕೃಪೆಗೆ ಪಾತ್ರರಾದರು.

ಶಿವಮೊಗ್ಗದ ಮುಸ್ಲಿಂ ಸಮುದಾಯದ ಗಾಯಕರು ನಡೆಸಿಕೊಟ್ಟ ಕಾರ್ಯಕ್ರಮ ಅದ್ಭುತವಾಗಿತ್ತು. ಭಕ್ತರು ಭಕ್ತಿಯ ಲೋಕದಲ್ಲಿ ತೇಲಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು