ಮೈಸೂರು

ಮೈಸೂರು: ರಾಜ್ಯದಲ್ಲಿ ಸರ್ಕಾರ ಸತ್ತಿದೆ- ಸಿದ್ದರಾಮಯ್ಯ ಆಕ್ರೋಶ

ಮೈಸೂರು: ರಾಜ್ಯದಲ್ಲಿ ಎಲ್ಲಿದೆ ಗವರ್ನಮೆಂಟ್ ? ಅದು ಸಂಪೂರ್ಣವಾಗಿ ಸತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಇದೊಂದು ಅತ್ಯಂತ ಭ್ರಷ್ಟ ಸರ್ಕಾರ. ಇಂತಹ ಸರ್ಕಾರವನ್ನು ಎಲ್ಲಿಯೂ ನೋಡಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಸರ್ಕಾರದ ಭ್ರಷ್ಟಾಚಾರ ಎಲ್ಲರಿಗೂ ಗೊತ್ತಿದೆ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಸಿಬಿಐ ಗೆ ಕೊಡಿ ತನಿಖೆ ಮಾಡಿಸಿ. ನಿಮ್ಮ ವಾಸ್ತವಾಂಶವನ್ನು ಸಮಾಜಕ್ಕೆ ತೋರಿಸಿ ಎಂದು ಸವಾಲ್ ಹಾಕಿದರು.

ಸಿಎಂ ಬೊಮ್ಮಾಯಿ ಅವರ ಸತ್ಯ ಹರಿಶ್ಚಂದ್ರರಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು ಯಾವತ್ತೂ ಹರಿಶ್ಚಂದ್ರ ಅಂತ ಹೇಳಿಕೊಂಡಿಲ್ಲ. ನಾನು ಹರಿಶ್ಚಂದ್ರನ ವಂಶ ಅಂತನೂ ಹೇಳಿಕೊಂಡಿಲ್ಲ. ನಾನು ಸಿದ್ದರಾಮಯ್ಯ ಅಂತನೇ ಹೇಳಿದ್ದೇನೆ. ನಾವು ನಿಜವಾದುದನ್ನು ಹೇಳಿದರೆ ಬೇರೆ ಏನನ್ನೋ ಸೃಷ್ಟಿ ಮಾಡಿ ನಮ್ಮ ಮೇಲೆ ಅಪಪ್ರಚಾರ ಮಾಡೋದು. ಧರ್ಮ, ಜಾತಿ ಕೋಮು ಸಂಘರ್ಷ, ಮಾಂಸ ಅದು ಇದು ಅಂತ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಇದೇ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು.

ನಮ್ಮ ಸರ್ಕಾರವಿದ್ದ ಕಾಲದಲ್ಲಿ. ಗಂಭೀರ ಆರೋಪ ಬಂದಾಗ ಯಾವುದೋ ಒಂದು ನೆಪಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿಲ್ಲ ಎಲ್ಲವನ್ನು ತನಿಖೆಗೆ ಒಪ್ಪಿಸಿದ್ದೆವು. ಅವರು ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುತ್ತೇವೆ ಅಂದ್ರು ಮಾಡಿದ್ದಾರಾ? ರೈತರ ಬೆಳೆಗೆ ನಗದಿ ಬೆಲೆ ಕೊಟ್ಟರಾ? ನಾಲ್ಕು ವರ್ಷಗಳು ಆಯ್ತಲ್ಲಾ ಏನ್ಮಾಡಿದ್ದೀರಿ. ಎಸಿಬಿ ಅಧಿಕಾರಕ್ಕೆ ಬಂದ 24 ಗಂಟೆಗೆ ಇಳಿಸುತ್ತೇವೆ ಅಂದಿದ್ದರು. ಅವರ ಅವಧಿ ಮುಗಿದರೂ ಶೇಕಡ 90 ಅವರ ಪ್ರಣಾಳಿಕೆ ಫುಲ್ ಫಿಲ್ ಆಗಿಲ್ಲ ಎಂದು ಕಿಡಿಕಾರಿದರು.

ಗುತ್ತಿಗೆದಾರರ ಸಂಘದವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿಸಿ ಅಂಥ ಕೋರಿದ್ದಾರೆ. ಇದರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ.ಕೆಂಪಣ್ಣ ನನಗೂ ಒಂದು ಕಾಪಿ ಕಳಿಸಿಕೊಟ್ಟಿದ್ದರು. ಏಪ್ರಿಲ್ ನಲ್ಲಿ ಮನವಿ ಮಾಡಿದ್ದರು. ಇಲ್ಲಿಯವರೆಗೂ ಏನೂ ಕ್ರಮ ವಹಿಸಿಲ್ಲ. ಎಲ್ಲಾ ಮಂತ್ರಿಗಳು ಕೂಡ ಕಮಿಷನ್ ಹೊಡಿತಾರೆ ಎಂದಿದ್ದರು. ಮುನಿರತ್ನ ಅವರ ಬಗ್ಗೆ ನೇರ ಆರೋಪ ಮಾಡಿದ್ದರು. ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ಬರೆದಿರೋದು ಇದೇ ಮೊದಲು ಇತಿಹಾಸದಲ್ಲಿ ಎಂದು ಅವರು ಹೇಳಿದರಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ ಪ್ರಾಮಾಣಿಕರು ಅಂತ ಹೇಳ್ತಾರೆ, ಲಂಚ ಅಂದ್ರೆ ಗೊತ್ತೇ ಇಲ್ಲ ಅಂತಾರೆ ಹಾಗಾದರೆ ತನಿಖೆಗೆ ಒಪ್ಪಿಸಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.

Gayathri SG

Recent Posts

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

11 mins ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

44 mins ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

1 hour ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

2 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago