Categories: ಮೈಸೂರು

ಮೈಸೂರು: ಹಗರಣದ ತನಿಖೆಗೆ ಪ್ರತಾಪ್ ಸಿಂಹ ಆಗ್ರಹ

ಮೈಸೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದಿನ ಸರ್ಕಾರದ ಎಲ್ಲ ಹಗರಣಗಳನ್ನು ತನಿಖೆ ಮಾಡುವುದಾಗಿ ಹೇಳಿದ್ದರು ಅದರಂತೆ ತನಿಖೆ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಸತ್ಯಾಸತ್ಯತೆ ಕರ್ನಾಟಕದ ಜನತೆಗೆ ಗೊತ್ತಾಗಬೇಕು. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.

ಬೆಂಗಳೂರು-ಮೈಸೂರು 118 ಕಿ.ಮೀ. ಹೆದ್ದಾರಿಯಲ್ಲಿ ಪೆನ್ಸಿಂಗ್ ಕಬ್ಬಿಣ ಕಳ್ಳತನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಪ್ರತಾಪ ಸಿಂಹ ಅವರು, ಗುಜರಿಗೆ ಹಾಕಲು ಯಾರಾದರೂ ಕಬ್ಬಿಣ ಕಳ್ಳತನ ಮಾಡಿದರೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಮನವಿ ಮಾಡಿದರು.

ದಕ್ಷಿಣ ಭಾರತದಲ್ಲಿಯೇ ಮೊದಲು ಪ್ರವೇಶ ಮತ್ತು ನಿರ್ಗಮನದ ತನಕ ಸಂಚಾರಕ್ಕೆ ಅಡಚಣೆ ಇರಬಾರದೆಂದು, ಪ್ರಾಣಿಗಳು ರಸ್ತೆ ಪ್ರವೇಶಿಸುವುದನ್ನು ತಡೆಯಲು ಪೆನ್ಸಿಂಗ್ ಹಾಕಲಾಗಿದೆ. ಈ ರಸ್ತೆಯಿಂದ ಆ ರಸ್ತೆಗೆ ಹೋಗಲು ಕಬ್ಬಿಣ ಕಟ್ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ 80 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.

Sneha Gowda

Recent Posts

ಮತದಾನ ಜಾಗೃತಿಗಾಗಿ: ಪಂಜಿನ ಮೆರವಣಿಗೆ ಜಾಥಾಗೆ ಚಾಲನೆ

ಮೇ 07 ರಂದು ನಡೆಯವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾನ ಮಾಡಿ ಜಿಲ್ಲೆಗೆ ಮಾದರಿಯಾಗಬೇಕು ಎಂದು…

6 mins ago

ಮಹಾದೇವ್ ಬೆಟ್ಟಿಂಗ್ ಆಪ್ ಅವ್ಯವಹಾರ: ನಟ ಸಾಹಿಲ್ ಖಾನ್ ಬಂಧನ

ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಾಹಿಲ್ ಖಾನ್ ಬಂಧನಕ್ಕೊಳಗಾಗಿದ್ದರೆ. ಈ ನಟನನ್ನು ಬಂಧಿಸಿರುವುದಾಗಿ ಪೊಲೀಸರು…

28 mins ago

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ…

35 mins ago

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 

49 mins ago

ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು !

ರಸ್ತೆ ಬದಿಯ ಚಿಕನ್ ಶವರ್ಮಾ ಸೇವಿಸಿ ಕನಿಷ್ಠ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಗೊರೆಗಾಂವ್…

1 hour ago

ಲೋಕಸಭಾ ಚುನಾವಣೆ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮರು…

1 hour ago