Categories: ಮೈಸೂರು

ಮೈಸೂರು: ಮಾಜಿ ಸಚಿವ ಎಂ.ಶಿವಣ್ಣ ಐಶಾರಾಮಿ ಕಾರು ಕಳ್ಳತನ, ಕಾರು ಕದ್ದ ಕಳ್ಳ ಫೈಲ್‌ ಇಟ್ಟು ಹೋದ

ಮೈಸೂರು: ಮಾಜಿ ಸಚಿವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರನ್ನು ಮುಸುಕುಧಾರಿಯೊಬ್ಬ ಕದ್ದೊಯ್ದಿರುವ ಘಟನೆ ನಡೆದಿದೆ.

ವಿಜಯನಗರ ಮೂರನೇ ಹಂತದಲ್ಲಿರುವ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರಿಗೆ ಸೇರಿದ ಐಶಾರಾಮಿ ಕಾರನ್ನು ಚಾಲಾಕಿ ಖದೀಮ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕದ್ದೊಯ್ದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂ.6ರಂದು ಮಧರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮುಸುಕುಧಾರಿ ವ್ಯಕ್ತಿ ಮನೆಯ ಆವರಣಕ್ಕೆ ಬಂದಿದ್ದು, ಬಳಿಕ ಮನೆಯೊಳಗಿದ್ದ ಕೀ ಎಗರಿಸಿ ಕಾರನ್ನು ಕದ್ದೊಯ್ದಿದ್ದಾನೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಚಾಲಕ ರಘು ಜೂ.5ರಂದು ರಾತ್ರಿ 8.50ಕ್ಕೆ ನಮ್ಮ ಮನೆಯ ಮುಂದೆ ನಿಲ್ಲಿಸಿ ಕಾರನ್ನು ಲಾಕ್ ಮಾಡಿ, ಕಾರಿನ ಕೀಯನ್ನು ನಮ್ಮ ಮನೆಯಲ್ಲಿ ಕೆಲಸ ಮಾಡುವ ಮನೋಜ್ ಕುಮಾರ್ ಅವರ ಕೈಯಲ್ಲಿ ಕೊಟ್ಟು ರಾತ್ರಿ 9 ಗಂಟೆಯಲ್ಲಿ ಮನೆಗೆ ಹೊರಟರು. ಜೂ.7ರಂದು ಬೆಳಗ್ಗೆ 7.15ರ ಸಮಯಕ್ಕೆ ನಮ್ಮ ಕಾರಿನ ಚಾಲಕ ರಘು ಅವರು ಮನೆ ಬಳಿ ಬಂದು ನೋಡಿದಾಗ ಕಾರು ಇರಲಿಲ್ಲ. ರಘು ಈ ವಿಚಾರವನ್ನು ನನಗೆ ತಿಳಿಸಿದ ನಂತರ ನಮ್ಮ ಮನೆಯಲ್ಲಿ ಕೆಲಸ ಮಾಡುವ ಮನೋಜ್ ಕುಮಾರ್ ಅವರನ್ನು ವಿಚಾರಿಸಿದ್ದು, ಆತ ನಾನು ಕೀಯನ್ನು ಮನೆ ಹಾಲ್‌ನಲ್ಲಿ ಇಟ್ಟು ಮನೆಗೆ ಹೋಗಿರುತ್ತೇನೆ ಎಂದು ಆತ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಶಿವಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಕಾರು ಕಳ್ಳತನವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಕಾರು ಕದ್ದವನು ಮತ್ತೆ ಮನೆಗೆ ಬಂದು ಫೈಲ್ ಇಟ್ಟು ಹೋಗಿದ್ದಾನೆ. 20 ವರ್ಷದಲ್ಲಿ ಇಂತಹ ಘಟನೆ ನನಗೆ ಆಗಿರಲಿಲ್ಲ. ಜೂನ್ 5ರಂದು ಎಚ್.ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8ಗಂಟೆಗೆ ಕಾರು ನಿಲ್ಲಿಸಿದ್ದೆ. ಈ ರಸ್ತೆಯಲ್ಲಿ ನೂರಾರು ಕಾರುಗಳು ನಿಲ್ಲುತ್ತವೆ. ಜೂನ್ 5 ಸಂಜೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಗ್ಗೆ ಕಾರು ನೋಡಿದರೆ ಕಾಣಲಿಲ್ಲ. ಮನೆಯವರನ್ನು ವಿಚಾರಿಸಿದೆ. ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ತಕ್ಷಣ ಪೊಲೀಸ್ ಆಯುಕ್ತರಿಗೆ ಹೇಳಿದೆ. ಪೊಲೀಸರು ಬಂದು ಪರಿಶೀಲನೆ ಮಾಡಿದರು. ಸಿಸಿ.ಟಿವಿ ನೋಡಿದಾಗ ಮಧರಾತ್ರಿ 1 ಗಂಟೆಗೆ ಕಾರು ಕಳ್ಳತನ ಆಗಿರುವುದು ಗೊತ್ತಾಗಿದೆ. ಆತ ಕಾಂಪೌಂಡ್ ಹಾರಿ ಬಂದಿದ್ದಾನೆ. ಆತನ ಹಿಂದೆ ಯಾರೋ ಸೇರಿಕೊಂಡು ವ್ಯವಸ್ಥಿತಿವಾಗಿ ಕಳ್ಳತನ ಮಾಡಿದ್ದಾರೆ.  ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು? ಎಂದು ಅಸಮಾಧಾನ ಹೊರ ಹಾಕಿದ್ದಾರೆ.

 

Sneha Gowda

Recent Posts

ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದ ಸಿದ್ದರಾಮಯ್ಯ

ಈ ಬಾರಿಯ ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

7 mins ago

ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ 5 ವರ್ಷದ ಮಗು ಸಾವು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

18 mins ago

ಮೇ 13 ರಿಂದ 17ರ ವರೆಗೆ  ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರ

ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂತ ಜೆರೋಸಾ…

28 mins ago

ತಾಕತ್ತಿದ್ದರೆ ಪಿಒಕೆಯನ್ನು ವಾಪಸ್ ಪಡೆಯಲಿ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ

ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ.ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ…

55 mins ago

ಅಲ್‌–ಜಜೀರಾ ಸುದ್ದಿವಾಹಿನಿ ಕಚೇರಿ ಮುಚ್ಚಲು ಸರ್ಕಾರ ತೀರ್ಮಾನಿಸಿದೆ ಎಂದ ಇಸ್ರೇಲ್ ಪ್ರಧಾನಿ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್…

1 hour ago

40 ವರ್ಷದ ರಾಜಕಾರಣದಲ್ಲಿ ಯಾವುದೇ ಆಪಾದನೆಗಳು ಇರಲಿಲ್ಲ: ಬಂಧನದ ಬಳಿಕ ರೇವಣ್ಣ ಮೊದಲ ಪ್ರತಿಕ್ರಿಯೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಮೊದಲ ಬಾರಿಗೆ…

2 hours ago