News Karnataka Kannada
Tuesday, April 23 2024
Cricket
ಮೈಸೂರು

ಮೈಸೂರು: ಸರ್ಕಾರಿ ಶಾಲೆ ಎಂದು ಮೂಗು ಮುರಿಯಬೇಡಿ

Mysuru: Don't break your nose as a government school
Photo Credit : News Kannada

ಮೈಸೂರು: ಸರ್ಕಾರಿ ಶಾಲೆ ಎಂದು ಯಾರೂ ಮೂಗು ಮುರಿಯಬಾರದು. ಸರ್‌ ಎಂ. ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂರಂತಹ ಮೇಧಾವಿಗಳು ಸರ್ಕಾರಿ ಶಾಲೆಯಲ್ಲೇ ಕಲಿತವರಾಗಿದ್ದಾರೆ ಎಂದು ಎಸ್. ಕೆ. ಫೌಂಡೇಶನ್ ಅಧ್ಯಕ್ಷರಾದ ಸಂತೋಷ್ ಕಿರಾಳು ಹೇಳಿದರು.

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಎಸ್ ಕೆ ಫೌಂಡೇಶನ್ (ಕಿರಾಳು) ವತಿಯಿಂದ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣಾ ಮತ್ತು ಶಾಲೆಯ ಹಿರಿಯ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆ ಎಂಬ ಕೀಳರಿಮೆ ಇಟ್ಟುಕೊಳ್ಳಬಾರದು, ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು.

ಸರ್ಕಾರವೂ ಶಾಲೆಯ ಅಭಿವೃದ್ಧಿಗೆ ಒತ್ತು ನೀಡಿದೆ. ಶಾಲೆಗಳ ಅಭಿವೃದ್ಧಿಗಾಗಿ ಸಂಘ ಸಂಸ್ಥೆಗಳ ಸಹಕಾರವನ್ನೂ ಬಯಸುತ್ತದೆ, ಸರ್ಕಾರಿ ಶಾಲೆಯಲ್ಲಿ ಕೆಲವು ಸೌಕರ್ಯಗಳ ಕೊರತೆ ಇರಬಹುದು, ಹಂತ ಹಂತವಾಗಿ ಅದು ಬಗೆಹರಿಯುತ್ತದೆ. ಅಗತ್ಯ ಸೌಕರ್ಯ ಪೂರೈಸುವತ್ತ ನಮ್ಮಂತಹ ನೂರಾರು ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದರು.

ಶಾಲೆಯ ಹಿರಿಯ ಶಿಕ್ಷಕರಾದ , ಶಿವಯ್ಯ, ನಾಗರತ್ನ, ಶಿಲ್ಪ, ಪುಷ್ಪಲತಾ, ನಾಗಮ್ಮ, ಮಮತಾ, ರವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಕಾಡನಹಳ್ಳಿ ಡಿ ಸ್ವಾಮಿ ಗೌಡ, ಶಾಲೆಯ ಹಳೆಯ ವಿದ್ಯಾರ್ಥಿ ರಾಮಾನುಜಂ, ಸಮಾಜ ಸೇವಕರಾದ ಪ್ರದೀಪ್ ಸಿಂಗ್, ಹರೀಶ್ ನಾಯ್ಡು, ಯುವ ಮುಖಂಡರಾದ ಶಿವು (ಕಿರಾಳು,) ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ ಇನ್ನಿತರರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು