News Karnataka Kannada
Saturday, April 20 2024
Cricket
ಮೈಸೂರು

ಮೈಸೂರು: ಸಿಎಂ ಬಳಿಗೆ ತೆರಳಲು ಆಟೋ ಚಾಲಕರ ನಿರ್ಧಾರ

Mysuru: Auto drivers decide to go to CM's house
Photo Credit : By Author

ಮೈಸೂರು: ಸಂಯುಕ್ತ ಕರ್ನಾಟಕ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಆಟೋ ರಿಕ್ಷಾ ಚಾಲಕರ ಸಭೆ ನಡೆದಿದ್ದು, ಶಕ್ತಿಯೋಜನೆಯಿಂದ ಸಮಸ್ಯೆಯುಂಟಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ನಗರದ ನ್ಯಾಯಾಲಯದ ಎದುರಿನ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ಹಲವು ಮಂದಿ ಆಟೋ ರಿಕ್ಷಾ ಚಾಲಕರು ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಿಂದಾಗಿ ಪ್ರಯಾಣಿಕರ ಕೊರತೆ ಎದುರಾಗಿದೆ. ಇದರೊಂದಿಗೆ ಆಪ್‌ಗಳ ಮೂಲಕ ಆಟೋ ರಿಕ್ಷಾ ಚಾಲನೆಗೆ ಅವಕಾಶ ನೀಡಿರುವುದರಿಂದ ತೊಂದರೆಯಾಗುತ್ತಿದೆ. ಜತೆಗೆ ನಾನಾ ಸೌಲಭಗಳು ಸಿಗದೇ ಆಟೋ ರಿಕ್ಷಾ ಚಾಲಕರು ಅತಂತ್ರರಾಗಿದ್ದಾರೆ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ಮಿತ್ರ ಮಾತನಾಡಿ, ಆಟೋ ರಿಕ್ಷಾ ಚಾಲಕರ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲು 30ಮಂದಿ ಆಟೋ ರಿಕ್ಷಾ ಚಾಲಕರ ನಿಯೋಗ ಜೂ.30ರಂದು ಆಟೋ ರಿಕ್ಷಾದಲ್ಲಿಯೇ ಮೈಸೂರಿನಿಂದ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಚಿವರಗೆ ಮನವಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಸಂಘದ ಡಿ.ಎಸ್.ಜಗದೀಶ್, ಸುನೀಲ್ ಕುಮಾರ್, ರಾಜನ್, ಶ್ರೀಕಂಠಯ್ಯ, ನಾಗರಾಜು, ಮಂಜು, ಬಸವಲಿಂಗಯ್ಯ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು