Categories: ಮೈಸೂರು

ಮೈಸೂರು: ಸರಗೂರಿನಲ್ಲಿ ನಡೆಸುತ್ತಿದ್ದ ಧರಣಿ ಕೈಬಿಟ್ಟ ಆದಿವಾಸಿಗಳು

ಸರಗೂರು: ಸರಗೂರು ತಾಲೂಕಿನ 52 ಹಾಡಿಗಳಲ್ಲಿದ್ದ ಆದಿವಾಸಿಗಳು ತಹಸೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯನ್ನು ತಹಸೀಲ್ದಾರ್ ಚೆಲುವರಾಜು ಅವರು ನೀಡಿದ ಭರವಸೆ ಮೇರೆಗೆ ಕೈಬಿಟ್ಟಿದ್ದಾರೆ.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ಕುಮಾರ್, ತಾಲೂಕಿನ ವ್ಯಾಪ್ತಿಯಲ್ಲಿ 52 ಹಾಡಿಗಳಿದ್ದು  ಈ ಎಲ್ಲಾ ಹಾಡಿಗಳಲ್ಲಿ ಜೇನು ಕುರುಬ, ಎರವ, ಸೋಲಿಗ, ಕಾಡುಕುರುಬ ( ಬೆಟ್ಟ ಕುರುಬ) ಈ ಸಮುದಾಯಗಳು ಸ್ವತಂತ್ರ ಪೂರ್ವದಲ್ಲಿ ಬಂಡಿಪುರ ಮತ್ತು ನಾಗರಹೊಳೆಯ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡು ಬಂದಿರುತ್ತಾರೆ. ಆದರೆ ಈ ಸಮುದಾಯವನ್ನು 1972 ರ ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ  ಹಾಗೂ ನುಗು ಅಣೆಕಟ್ಟೆಯನ್ನು ಕಟ್ಟುವಾಗ ಇವರ  ಅಭಿವೃದ್ಧಿ ಮತ್ತು ಪುನರ್ವಸತಿ ಬಗ್ಗೆ ಸರ್ಕಾರವು ಯಾವುದೇ ಯೋಜನೆಗಳನ್ನು ರೂಪಿಸದೆ  ಏಕಾಏಕಿ ಹೊರತಂದು ಈ ಸಮುದಾಯಗಳನ್ನು ಅತಂತ್ರ ಪರಿಸ್ಥಿತಿ ತಂದಿರುತ್ತಾರೆ.

ಈ ಸಮುದಾಯಗಳು ಜೀವನ ನಡೆಸಲು ಭೂಮಾಲಿಕರ ಮನೆಗಳಲ್ಲಿ, ಕೇರಳದ ಭೂಮಾಲೀಕನ ಮನೆಗಳಲ್ಲಿ, ಕಾಫಿ ತೋಟಗಳಲ್ಲಿ, ಕೂಲಿ ಮಾಡಿಕೊಂಡು ದಿನದ ಜೀವನ ಮುಂದುವರಿಸುತ್ತಿದ್ದಾರೆ ಹೀಗಿರುವಾಗ ಇವರ ಜೀವನಗಳನ್ನು  ಸರಿಪಡಿಸಲು ಸರ್ವೋಚ್ಛ ನ್ಯಾಯಾಲಯ ಇವರಿಗೆ ನ್ಯಾಯ ದೊರಕಿಸಿದೆ ಎಂದು ಒತ್ತಾಯಿಸಿದರು.

ಧರಣಿ ನಿರತರ ಮನವಿ ಸ್ವೀಕರಿಸಿ ಮಾತನಾಡಿದ ಸರಗೂರಿನ ತಹಸೀಲ್ದಾರ್ ಚೆಲುವರಾಜು ಹಾಡಿ ಜನರು ಸರ್ವೆ ನಂಬರ್ 17 ಹಾಗೂ 21ಕ್ಕೆ  ಅರ್ಜಿ ಸಲ್ಲಿಸಿದ್ದು, ಅದು  2001ರಲ್ಲಿ ಹಿಂದೆ ಇದ್ದ ಕಮಿಟಿಯವರು ಇದನ್ನು ವಜಾ ಮಾಡಿರುತ್ತಾರೆ. ಇವರು ಅಫೀಲನ್ನು  ಮೇಲ್ಮನವಿಗೆ ಹಾಕಿದರು. ಹಿಡುವಳಿ ಲ್ಯಾಂಡ್ ಆದ್ದರಿಂದ ಗೋಮಾಳ ಹಾಗೂ ಕರಾಬು ಮಂಜೂರು ಮಾಡಲು ಅವಕಾಶವಿರುವುದಿಲ್ಲ ಹಾಗೂ  ಹುಲ್ಲುಬನಿ, ಕರಾಬು ಎಂದು ಬಂದಿರುವುದನ್ನು ಕಡತಗಳ ಮೂಲಕ ಪರಿಶೀಲಿಸಿ ಅದು ಹಿಡುವಳಿ ಲ್ಯಾಂಡ್ ಎಂದು ಬಂದರೆ ಅದನ್ನು ನೀಡುವುದಕ್ಕೆ ಬರುವುದಿಲ್ಲ.

ಸರ್ವೆ ನಂಬರ್ 30 ರಲ್ಲಿ 729 ಎಕರೆ ಹುಲ್ಲು ಬನಿ ಭೂಮಿ ಎಂದು ದಾಖಲಾತಿಯಲ್ಲಿದೆ. ಇದನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಅದು ಕರಾಬು ಎಂದು ಬಂದರೆ, ಫಾರಂ ನಂಬರ್ 57 ಅರ್ಜಿ ಹಾಕಿ ತದ ನಂತರ ಪತ್ರದ ಆಧಾರದ ಮೇಲೆ ಪರಿಗಣಿಸಬಹುದು ಎಂದು ತಿಳಿಸಿದರು.

ಆ ನಂತರ ತಹಸಿಲ್ದಾರ್ ರವರಿಗೆ ನೀಡಿರುವ ಪತ್ರಗಳ ಆಧಾರದ ಮೇಲೆ ಹಾಗೂ ಭೂಮಿ ಸಿಗುವ ಭರವಸೆ ಮೇರೆಗೆ ಎರಡು ದಿನದಿಂದ ಸ್ಥಳದಲ್ಲೇ ಊಟ-ತಿಂಡಿ ಮಾಡಿಕೊಂಡು ಹೂಡಿದ್ದ  ಧರಣಿಯನ್ನು ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಸರಗೂರು ವೃತ್ತ  ನಿರೀಕ್ಷಕರಾದ ಆನಂದ್, ಉಪ ನಿರೀಕ್ಷಕ ಶರಣ ದಾಸ ರೆಡ್ಡಿ, ಎಚ್ ಡಿ ಕೋಟೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಸ್ವಾಮಿ, ಶಿರಸ್ತೆದಾರ್ ಹರೀಶ್, ಬಿ ಮಟಕೆರೆ ಗ್ರಾಮ  ಪಂಚಾಯತಿ ಸದಸ್ಯ ಬೆಟ್ಟಸ್ವಾಮಿ, ಪುಟ್ಟನಾಯಕ,ಎಂ ಸಿ ತಳಲು ಬಸಪ್ಪ, ಚನ್ನಗುಂಡಿ ಚಿಕ್ಕಮಾದ, ಕೆಬ್ಬೆಪುರ ಹಾಡಿ ಶ್ರೀಧರ್, ನಾಗರಾಜು, ಪುಟ್ಟ  ಬಸವಯ್ಯ, ಮಹಾಲಿಂಗಯ್ಯ, ಮಲ್ಲಿಗಮ್ಮ, ದೇವಮಣಿ, ನಿಂಗರಾಜಮ್ಮ, ಮಂಜುಳಾ ಮನೆಯಲ್ಲಿದ್ದರು.

Sneha Gowda

Recent Posts

ಕುರ್ಕುರೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯಿಂದ ವಿಚ್ಛೇದನ

ಕುರ್ಕುರೆ ಪ್ಯಾಕೆಟ್‌ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ ಬಯಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

5 mins ago

ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಹೆಚ್.ಡಿ. ರೇವಣ್ಣ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ…

19 mins ago

ಸಾಲ ತೀರಿಸಲು ಮಗುವನ್ನೇ ಮಾರಿದ ಪಾಪಿ ತಂದೆ

ಸಾಲ ತೀರಿಸಲು ತಂದೆಯೊಬ್ಬ ತನ್ನ ಗಂಡು ಮಗುವನ್ನೇ ಮಾರಿದಘಟನೆಯೊಂದು ಕೋಲಾರದಲ್ಲಿ ನಡೆದಿದೆ.

22 mins ago

ಐಪಿಎಲ್​ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ರಿಂಕು ಸಿಂಗ್ ಜೆರ್ಸಿ ತೊಟ್ಟು ಬಾಲ್ ಕಳ್ಳತನ

ಕೆಕೆಆರ್​ ಮತ್ತು ಗುಜರಾತ್​ ಟೈಟಾನ್ಸ್​ ನಡುವಣ ಪಂದ್ಯದ ವೇಳೆ ಚೆಂಡನ್ನು ಕದ್ದು ಸಿಕ್ಕಿಬಿದ್ದು, ಪೊಲೀಸರಿಂದ ಪೆಟ್ಟು ತಿಂದ ಘಟನೆ ನಡೆದಿದ್ದು.…

40 mins ago

ಇನ್ಮುಂದೆ ಆರ್‌ಸಿಬಿಗೆ ಕೆಎಲ್ ರಾಹುಲ್ ನಾಯಕ !

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಕೊನೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು…

56 mins ago

ಹಳ್ಯಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಶಾಲೆಯಲ್ಲಿ ರವಿವಾರ ನಡೆದಿದ್ದ ಕೊಲೆಯ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇದಿಸುವಲ್ಲಿ ಸಕ್ಸಸ್…

59 mins ago