ಮೈಸೂರು: ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ರದ್ದಿಗೆ ಮನವಿ

ಮೈಸೂರು: ತಿ.ನರಸೀಪುರ ತಾಲೂಕಿನ ಸೋಮನಾಥಪುರ  ಮತ್ತು ಶ್ರೀರಂಗಪಟ್ಟಣದಲ್ಲಿ  ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ರದ್ದುಗೊಳಿಸಿ ಆಫ್‌ಲೈನ್‌ ಟಿಕೆಟ್‌ ನೀಡುವಂತೆ ಪ್ರವಾಸೋದ್ಯಮ ಸಚಿವರು ಹಾಗೂ ಪುರಾತತ್ವ ಇಲಾಖೆಗೆ ಮೈಸೂರು ಟ್ರಾವಲ್ಸ್‌ ಅಸೋಸಿಯೇಷನ್‌ ಪತ್ರ ಬರೆದಿದೆ.

ಮೈಸೂರಿನ ತಿ.ನರಸೀಪುರದಲ್ಲಿರುವ ಸೋಮನಾಥಪುರ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕೋಟೆಗಳೆರಡೂ  ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ  ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಪ್ರವಾಸಿ ತಾಣಗಳಾಗಿದ್ದು, ಇಲ್ಲಿಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಿರುತ್ತಾರೆ. ಈ ಪೈಕಿ ನಗರ ಭಾಗದವರು, ಹಳ್ಳಿಗಳಿಂದ ಬರುವವರು..ಹೀಗೆ ಎಲ್ಲರೂ ಇರುತ್ತಾರೆ. ಕೆಲವರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಕೊಳ್ಳುವುದು ಹೇಗೆಂದು ತಿಳಿದಿರುವುದಿಲ್ಲ. ಪ್ರವಾಸಿಗರಿಗೆ ಸಹಾಯ ಮಾಡಲು ಅಲ್ಲಿ ಸಿಬ್ಬಂದಿ ಇರುತ್ತಾರಾದರೂ ಅವರು ಹೇಳಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡು ಅಂತೆಯೇ ಟಿಕೆಟ್‌ ಕೊಳ್ಳಲು ಬರುವುದಿಲ್ಲ.

ಇದರಿಂದಾಗಿ ಎಷ್ಟೋ ಸ್ಥಳೀಯ ಪ್ರವಾಸಿಗರು ನಿರಾಶರಾಗಿ ಹಿಂದಿರುಗುತ್ತಿರುವ ನಿದರ್ಶನಗಳೂ ಇವೆ. ಆದ್ದರಿಂದ ಇಲಾಖೆ ಈ  ಬಗ್ಗೆ ಗಮನಹರಿಸಿ ಈ ಸ್ಥಳಗಳಲ್ಲಿ ಆನ್‌ಲೈನ್ ಬದಲು ಮಾಮೂಲಿನಂತೆ ಟಿಕೆಟ್‌ ನೀಡುವ ವ್ಯವಸ್ಥೆ ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ಇನ್ನಷ್ಟು ಪ್ರವಾಸಿಗರು ಆಗಮಿಸಲು ಸಾಧ್ಯ. ಇದನ್ನು ಗಮನದಲ್ಲಿರಿಸಿಕೊಂಡು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Sneha Gowda

Recent Posts

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

33 mins ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

34 mins ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

53 mins ago

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

57 mins ago

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

1 hour ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

1 hour ago