Categories: ಮೈಸೂರು

ಮೈಸೂರು: ಬೃಹತ್ ಉಚಿತಾ ಆರೋಗ್ಯ ತಪಾಸಣ ಶಿಬಿರ

ಮೈಸೂರು: ಕೆ.ಎನ್.ಪುಟ್ಟಬುದ್ದಿ ಫೌಂಡೇಷನ್, ಆರೋಗ್ಯ ಭಾರತಿ ಮತ್ತು ಸುಯೋಗ್ ಆಸ್ಪತ್ರೆ ವತಿಯಿಂದ ಭಾನುವಾರ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಉಚಿತಾ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆ ನಂತರ ಮಾತನಾಡಿದ ವರುಣಾ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶರತ್ ಪುಟ್ಟಬುದ್ಧಿ ಗ್ರಾಮೀಣ ಪ್ರದೇಶದ ಜನರು ಸ್ವಸ್ಥ ಜೀವನ ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆ.ಎನ್.ಪುಟ್ಟಬುದ್ದಿ ಫೌಂಡೇಷನ್ ವತಿಯಿಂದ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವರುಣಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗುವುದು. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಪ್ರಥಮ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಕೆ. ಎನ್. ಪುಟ್ಟಬುದ್ಧಿ, ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶರತ್ ಪುಟ್ಟಬುದ್ಧಿ, ಕೋಣನೂರು ಗ್ರಾಮ ಪಂಚಾಯಿತಿ ಸದಸ್ಯಸರುಗಳಾದ ಮಹದೇವಸ್ವಾಮಿ, ರವಿಕುಮಾರ್, ಮಹೇಶ, ಮಹದೇವಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವಣ್ಣ, ಮಾದಪ್ಪ, ಜೈಶಂಕರ್, ಶಿವಕುಮಾರ್, ಗುರುಮಲ್ಲಮ್ಮ ಹದಿನಾರು ಮತ್ತು ಕೋಣನೂರು ಗ್ರಾಮಸ್ಥರು ಭಾಗವಹಿಸಿದ್ದರು.

ಶಿಬಿರದ ಉಪಯೋಗ ಪಡೆದ ಜನರು:
ಬೆಳೆಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಆರೋಗ್ಯ ಶಿಬಿರದಲ್ಲಿ ೪೦೦ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸುಯೋಗ್ ಆಸ್ಪತ್ರೆ ಮತ್ತು ಡಾ. ಹೇಮಂತ್ ಕುಮಾರ್ ತಂಡದ ವತಿಯಿಂದ ೩೫೦ ಕ್ಕೂ ಹೆಚ್ಚು ಜನರಿಗೆ ರಕ್ತದ ಒತ್ತಡ ಮತ್ತು ಸಕ್ಕರೆ (BP ಮತ್ತು ಶುಗರ್) ಅಂಶ ಪರೀಕ್ಷೆ ಮಾಡಲಾಯಿತು. ಬಾಲಾಜಿ ಐ ಕೇರ್ ಮತ್ತು ಓಪ್ಟಿಕಲ್ಸ್ ವತಿಯಿಂದ ೧೮೦ ಕ್ಕೂ ಹೆಚ್ಚು ಜನರು ಕಣ್ಣಿತ ತಪಾಸಣೆಗೆ ಒಳಪಟ್ಟರು. ೩೦ ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು. ೧೫ ಜನಕ್ಕೆ ಈಸಿಜಿ ಪರೀಕ್ಷೆ ಮಾಡಲಾಯಿತು. ಗ್ರಾಮ ಒನ್ ವರುಣಾ ಚನ್ನಬಸಪ್ಪ ಮತ್ತು ತಂಡದವರಿಂದ ೮೫ ಜನರಿಗೆ ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಕಾರ್ಡ್ ನೊಂದಣಿ ಮಾಡಿಕೊಡಲಾಯಿತು.

Sneha Gowda

Recent Posts

ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಗೆಳೆಯನಿಂದಲೇ ಕೊಲೆ

ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

7 mins ago

ಏನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ: ಹೆಚ್.ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ.…

15 mins ago

ಎವರೆಸ್ಟ್ ಚಿಕನ್ ಮಸಾಲಾ ನಿಷೇದಕ್ಕೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ…

19 mins ago

ಎಚ್.ಡಿ.ಕೋಟೆ: ಕಬಿನಿ ಜಲಾಶಯಕ್ಕೆ ಹಾರಿ ನೌಕರ ಆತ್ಮಹತ್ಯೆ

ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

32 mins ago

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ₹32 ಲಕ್ಷ ದರೋಡೆ

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಅವರ ಬಳಿ ಇದ್ದ ₹32 ಲಕ್ಷವನ್ನು ದೋಚಿಕೊಂಡು…

34 mins ago

ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಬಟ್ಟೆ ತೊಳೆಯಲು ಬಳಕೆ!

ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ…

38 mins ago