ಮೈಸೂರು

ಮೈಸೂರು: ಆರ್.ಧ್ರುವನಾರಾಯಣ್ ರವರ ಸಾವಿಗೆ ಕಾರಣ ನೀಡಿದ ವೈದ್ಯರು!

ಮೈಸೂರು: ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಹೊಟ್ಟೆಹುಣ್ಣು ಒಡೆದು ಆಂತರಿಕ ತೀವ್ರ ರಕ್ತಸ್ರಾವದಿಂದಾದ ಹೃದಯ ಮತ್ತು ಶ್ವಾಸಕೋಶ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಅವರಿಗೆ ಪ್ರಥಮ ಹಂತದ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿ ವಾಪಸಾಗಿದ್ದ ಧ್ರುವನಾರಾಯಣ್ ಮನೆಯ ಮೇಲಿನ ಮಹಡಿಯಿಂದ ಕಾರು ಚಾಲಕನನ್ನು ಕರೆದಿದ್ದರು. ಚಾಲಕ ತೆರಳಿ ನೋಡುವಷ್ಟರಲ್ಲಿ ವಾಂತಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.

ತುರ್ತು ಸಮಸ್ಯೆ ಇದೆ ಎಂದು ನನ್ನನ್ನು ಕರೆದರು. ಮನೆಯ ಮಹಡಿಗೆ ಹೋಗಿ ನೋಡಿದಾಗ ಧ್ರುವನಾರಾಯಣ ಅವರು ಮಂಚದಿಂದ ಕೆಳಗೆ ನೆಲದಲ್ಲಿ ರಕ್ತದಲ್ಲಿ ಮಡುವಿನಲ್ಲಿ ಬಿದ್ದಿದ್ದರು. ಮಾತನಾಡಿಸಲು ನೋಡಿದರೆ ಪ್ರಜ್ಞೆ ಇರಲಿಲ್ಲ. ಶ್ವಾಸ ಹಾಗೂ ಹೃದಯ ಬಡಿತವೂ ಸರಿಯಾಗಿರಲಿಲ್ಲ. ತಕ್ಷಣ ನಮ್ಮ ಡಿಎಂಆರ್ ಆಸ್ಪತ್ರೆಗೆ ಕರೆದೊಯ್ದರು ಎಂದು ಧ್ರುವನಾರಾಯಣ ಕಾರು ಚಾಲಕ ತಿಳಿಸಿದರು ಎಂದು ಪಕ್ಕದ ಮನೆಯ ನಿವಾಸಿ ವೈದ್ಯ, ಡಿಎಂಆರ್ ಆಸ್ಪತ್ರೆಯ ಮಾಲೀಕ ಡಾ.ಮಂಜುನಾಥ್ ತಿಳಿಸಿದರು.

ಡಿಎಂಆರ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 21 ಸುತ್ತು ಹೃದಯ ಪುನಶ್ಚೇತನ ಚಿಕಿತ್ಸೆ ನೀಡಲಾಯಿತು. ಆದರೂ ಶ್ವಾಸ ಹಾಗೂ ಹೃದಯ ಬಡಿತ ಚೇತರಿಸಲಿಲ್ಲ. ಆಲ್ಸರ್ ಒಡೆದು ತೀವ್ರ ರಕ್ತ ಸ್ರಾವದಿಂದ ದೇಹದಲ್ಲಿ ರಕ್ತಹೀನತೆ ಸಂಭವಿಸಿ ಹೃದಯಾಘಾತ, ಶ್ವಾಸಕೋಶದ ಪ್ರಕ್ರಿಯೆ ಸ್ಥಗಿತ ಸಂಭವಿಸಿತ್ತು. ಕೊನೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬೆಳಗ್ಗೆ 8.26ಕ್ಕೆ ಘೋಷಿಸಲಾಯಿತು. ವೈದ್ಯರ ತಂಡದಲ್ಲಿ ಜಯದೇವ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ವೈದ್ಯ ಡಾ.ಸದಾನಂದ ಇದ್ದರು. ಇವರೇ ಧ್ರುವನಾರಾಯಣ್ ಅವರ ದೈನಂದಿನ ಆರೋಗ್ಯ, ನಿಯಮಿತ ತಪಾಸಣೆ ಮಾಡುತ್ತಿದ್ದವರು ಎಂದು ಡಾ.ಮಂಜುನಾಥ್ ಹೇಳಿದರು.

ಧ್ರುವನಾರಾಯಣ್ ಅವರಿಗೆ ಹೃದಯ ಸಂಬಂಧಿ ಅಥವಾ ಇನ್ಯಾವುದೇ ರೋಗ ಇರುವ ದಾಖಲೆಗಳಿಲ್ಲ. ಆದರೆ, ಮಧುಮೇಹ ಇತ್ತು ಎಂದು ಅವರ ತಪಾಸಣೆ ನಡೆಸುತ್ತಿದ್ದ ವೈದ್ಯ ಡಾ.ಸದಾನಂದ ತಿಳಿಸಿದ್ದಾರೆ ಎಂದು ಮಂಜುನಾಥ್ ಹೇಳಿದರು. ಧ್ರುವನಾರಾಯಣ ಅವರಿಗೆ ಹೊಟ್ಟೆ ಹಾಗೂ ಕರುಳಿನ ಹುಣ್ಣು ಅಲ್ಸರ್ ಸಮಸ್ಯೆ ಇತ್ತು ಎಂಬುದು ರೋಗ ಪರಿಶೋಧನೆಯಿಂದ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಅವರಿಗೂ ಮಾಹಿತಿ ಇರಲಿಲ್ಲ ಎಂದರು.

ಶುಕ್ರವಾರ ರಾತ್ರಿ 10ಕ್ಕೆ ಡಾ.ಸದಾನಂದ ಅವರಿಗೆ ಫೋನ್ ಮಾಡಿದ್ದ ಧ್ರುವನಾರಾಯಣ ಸ್ವಲ್ಪ ದೈಹಿಕ ಸ್ವಾಸ್ಥ್ಯ ಇದೆ ಎಂದು ಹೇಳಿಕೊಂಡಿದ್ದರು. ಈಗಲೇ ತಪಾಸಣೆಗೆ ಬನ್ನಿ ಎಂದು ವೈದ್ಯರು ಕರೆದಿದ್ದರು. ನಾಳೆ ಬೆಳಗ್ಗೆ ಬರುತ್ತೇನೆ ಎಂದು ಧ್ರುವ ಉತ್ತರಿಸಿದ್ದರು. ಎಂದು ಸದಾನಂದ ಅವರ ಮಾತುಗಳನ್ನು ಡಾ.ಮಂಜುನಾಥ್ ನೆನಪಿಸಿಕೊಂಡರು. ಶುಕ್ರವಾರ ಇಡೀ ದಿನ ವಿವಿಧ ಪ್ರವಾಸ ಮಾಡಿದ್ದರು ಎಂದು ತಿಳಿಸಿದ್ದಾರೆ.

Sneha Gowda

Recent Posts

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

4 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

12 mins ago

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…

27 mins ago

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

29 mins ago

ಕಾಂಗ್ರೆಸ್‌ಗೆ 1 ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲಾಗಲಿಲ್ಲ: ಸಂಜೀವ ಮಠಂದೂರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ…

30 mins ago

‘ಜಂಟಿ ಸರ್ವೆ ಆಗುವ ತನಕ ಹಿರೀಕಾಟಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…

47 mins ago