ನಂಜನಗೂಡು : ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವ ನರೇಂದ್ರ ಅವರ ಇಂದು ಹುಟ್ಟುಹಬ್ಬ ಇರುವುದರಿಂದ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನ ಜನ್ಮದಿನದಂದು ಯಾರು ಫ್ಲೆಕ್ಸ್ , ಬ್ಯಾನರ್ ಹಾಕಬೇಡಿ ಶಾಲು ಮಾಲೆ ಹೂವುಚ್ಚ ಕೇಕ್ ಗಳನ್ನು ತರಬಾರದು ಎಂದು ಮನವಿ ಮಾಡಿದ್ದಾರೆ.
ಹಾಗೆ ಯಾವುದೇ ವೆಚ್ಚ ಮಾಡದೆ ಅದೇ ಹಣವನ್ನು ಬಡವರು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತು ಸ್ನೇಹಿತರಿಗೆ ಮನವಿಯನ್ನು ಮಾಡಿದ್ದಾರೆ. ಈಗಾಗಲೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರೈತರಿಗೆ ಆಗಾಗ್ಗೆ ಉಪಟಳ ನೀಡುತ್ತಾ ತಲೆನೋವಾಗಿದ್ದ ಪುಂಡಾನೆಯನ್ನು ಸುಮಾರು ಇಪ್ಪತೈದು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳು ಗೋಪಾಲಸ್ವಾಮಿ ಬೆಟ್ಟದ…
ಧಾರವಾಡದ ಐಐಟಿ ನೂತನ ನಿರ್ದೇಶಕರಾಗಿ ಪ್ರೊ. ಎಸ್.ಆರ್.ಮಹಾದೇವ ಪ್ರಸನ್ನ ನೇಮಕಗೊಂಡಿದ್ದಾರೆ. 2023 ರಲ್ಲಿ ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಕಳೆದ ಏಪ್ರಿಲ್ 24 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ…
ಸಿಲಿಕಾನ್ ಸಿಟಿ ಮಂದಿಗೆ ಮತ್ತೆ ಮಳೆರಾಯ ತಂಪೆರೆದಿದ್ದಾನೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಬೆಂಗಳೂರು ಸೇರಿದಂತೆ…
ಟಾಲಿವುಡ್ ನಟ ಅಲ್ಲು ಅರ್ಜುನ್ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು…