News Karnataka Kannada
Saturday, April 20 2024
Cricket
ಮೈಸೂರು

ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕು: ಪ್ರೊ.ಡಿ.ಆನಂದ್

ಶಿಕ್ಷಣ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸಮಾನವಾಗಿ ದೊರೆಯುವಂತೆ ಮಾಡುವ ಜವಾಬ್ದಾರಿ ಪಾಧ್ಯಾಪಕರ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ದಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.
Photo Credit : By Author

ಮೈಸೂರು: ಶಿಕ್ಷಣ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸಮಾನವಾಗಿ ದೊರೆಯುವಂತೆ ಮಾಡುವ ಜವಾಬ್ದಾರಿ ಪಾಧ್ಯಾಪಕರ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ದಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗದ ಕಾಲೇಜು ಪ್ರಾಧ್ಯಾಪಕರಿಗೆ ಅಂತರ್ಗತ ಶಿಕ್ಷಣ ಮತ್ತು ವಿಕಲಚೇತನತೆ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಧ್ಯಾಪಕರು ಕಲಿಸುವ ಪಾಠ ಎಲ್ಲರನ್ನೂ ತಲುಪಬೇಕು. ಅಂಗವಿಕಲತೆ ಶಾಪವಲ್ಲ. ಅದನ್ನು ಮರೆತು ಸಮಾಜದ ಆಸ್ತಿಯಾಗಿ ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡಬೇಕಿದೆ. 2015ರಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿರುವ 17 ಸುಸ್ಥಿರ ಅಭಿವೃದ್ಧಿಗಳಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ವಿಶೇಷ ಚೇತನ ಮಕ್ಕಳನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಸಮರ್ಥನಂ ಸಂಸ್ಥೆಯ ಟ್ರಸ್ಟಿ ವಾಸಂತಿ ಸವಣೂರು ಮಾತನಾಡಿ, ಸಮರ್ಥನಂ ಅಂಗವಿಕಲರ ಸಂಸ್ಥೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸ್ವಯಂ ಸೇವಾ ಸಂಸ್ಥೆಯಾಗಿದ್ದು, 1997ರಿಂದ ಭಾರತದಲ್ಲಿ ದೃಷ್ಠಿಹೀನರು, ವಿಕಲಚೇತನರು ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖವಾಗಿ ಈ ಸಂಸ್ಥೆ ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಠಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರ ವೈಯಕ್ತಿಕ ಸ್ವಾವಲಂಬನೆ ಸಾಧಿಸುವುದಾಗಿದೆ.

ಸಮಾಜದಲ್ಲಿ ತಮ್ಮದೇ ಆಗಿರುವ ಪ್ರಮುಖ ಹೆಜ್ಜೆ ಇಡುವಲ್ಲಿ ಸಹಾಯ ಮಾಡುವತ್ತ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆ ದೃಷ್ಟಿ ವಿಕಚೇತನರ ಮತ್ತು ಅವಕಾಶ ವಂಚಿತರ ಅಭಿವೃದ್ಧಿಗಾಗಿ ತಾರತಮ್ಯ ರಹಿತ ಅವಕಾಶ ಒದಗಿಸುವ ಕ್ರೋಢೀಕೃತ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.

ಡಾ.ಹೇಮಂತ್ ಕುಮಾರ್ ಮತ್ತು ಡಾ.ವಿಕ್ಟರಿ ಅಂತರ್ಗತ ಶಿಕ್ಷಣ ಹಾಗೂ ವಿಕಲಚೇತನ ಶಿಕ್ಷಣ ಕುರಿತು ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಮೈಸೂರು ವಿಭಾಗದ ವಿವಿಧ ಕಾಲೇಜುಗಳಿಂದ 110ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಆರ್.ನಳಿನಿ, ಐಕ್ಯೂಎಸಿ ಸಂಚಾಲಕ ಡಾ.ಮಂಜುನಾಥ್, ದಿವ್ಯಂಗ ಸಬಲೀಕರಣ ಸಮಿತಿಯ ಡಾ.ನಾಗರಾಜು, ಪ್ರೊ.ಜಯಪ್ರಕಾಶ್ ಹೆಗ್ಡೆ, ಸಮರ್ಥನಂ ಸಂಸ್ಥೆಯ ಗುರುರಾಘವೇಂದ್ರ, ರಾಘವೇಂದ್ರ, ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು, ರಕ್ಷಾ, ಸುಹಾಸ್, ಜಿ.ಬಿ.ಶಿವಕುಮಾರ್, ನಿರ್ಮಲ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು