ಪ್ರವಾಸಿಗರಿಗೆ ಮೈಸೂರು ಏಕೆ ಇಷ್ಟ ಗೊತ್ತಾ!

ಮೈಸೂರು: ಮೈಸೂರಿಗೆ ದಸರಾ ಕಳೆ ಆವರಿಸುತ್ತಿದ್ದಂತೆಯೇ ಇದುವರೆಗೆ ಮನೆಯಲ್ಲಿಯೇ ಬೆಚ್ಚಗೆ ಕುಳಿತಿದ್ದ ಪ್ರವಾಸಿಗರು ಮೈಕೊಡವಿಕೊಂಡು ಮೈಸೂರಿನತ್ತ ಮುಖ ಮಾಡುತ್ತಾರೆ. ಈಗ ಮೈಸೂರಿನಲ್ಲಿ ಹೆಜ್ಜೆ ಹಾಕುವುದೇ ಒಂದು ವಿಶಿಷ್ಟ ಅನುಭವ ಎಂದರೆ ತಪ್ಪಾಗಲಾರದು.

ಮೈಸೂರು ಮಹಾರಾಜರ ದೂರದೃಷ್ಟಿಯಲ್ಲಿ ನಿರ್ಮಾಣವಾದ ನಗರ ಎಂದರೆ ತಪ್ಪಾಗಲಾರದು. ಇಲ್ಲಿ ನಿಸರ್ಗದ ಸೌಂದರ್ಯವಿದೆ. ಜತೆಗೆ ಒಂದೊಳ್ಳೆಯ ವಾತಾವರಣವಿದೆ. ಅಷ್ಟೇ ಅಲ್ಲದೆ ಪ್ರವಾಸಿಗರು ನೋಡ ತಕ್ಕ ಹಲವು ಪ್ರವಾಸಿ ತಾಣಗಳಿವೆ. ಮೈಸೂರು ನಗರ ಮತ್ತು ಸುತ್ತಮುತ್ತ ಹಲವು ಪ್ರವಾಸಿ ತಾಣಗಳು ಇರುವುದರಿಂದ ಪ್ರವಾಸಿಗರು ಮೈಸೂರನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ನಗರ, ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲದೆ, ಹತ್ತಿರದ ಜಿಲ್ಲೆಗಳಾದ ಕೊಡಗು, ಚಾಮರಾಜನಗರಕ್ಕೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮೈಸೂರಿನತ್ತ ಹೆಚ್ಚಿನವರು ಮುಖ ಮಾಡಿರಲಿಲ್ಲ. ಆದರೆ ಈಗ ಜನ ಕೊರೊನಾವನ್ನು ಮರೆತಿದ್ದಾರೆ. ಎಂದಿನ ಬದುಕಿಗೆ ಜನ ಜೀವನ ಮರಳುತ್ತಿದೆ. ದುಡಿಮೆಯ ಜತೆಯಲ್ಲಿಯೇ ನಿತ್ಯದ ಜಂಜಾಟಗಳನ್ನು ಬದಿಗೊತ್ತಿ ಗೆಳೆಯರೊಂದಿಗೆ, ಗೆಳತಿಯರೊಂದಿಗೆ, ತನ್ನ ಸಂಸಾರದೊಂದಿಗೆ ಒಂದಷ್ಟು ಸಮಯವನ್ನು ಕಳೆದು ಬರುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಹೀಗಾಗಿ ಹೆಚ್ಚಿನವರು ಮೈಸೂರನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಮೈಸೂರಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಾಣಿಸುತ್ತಿದೆ.

ಮೈಸೂರಿನ ಬಗ್ಗೆ ಹೇಳುವುದಾದರೆ ಜಗತ್ತಿನ ಸುಂದರ ನಗರಗಳಲ್ಲಿ ಒಂದು ಎಂಬ ಹೆಮ್ಮೆಯೂ ಇದೆ. ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ.  ಮೈಸೂರನ್ನು ಆಳಿದ ಮಹಾರಾಜರುಗಳು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ  ಆಗಿದ್ದರಿಂದ ಕಲೆ, ಸಂಸ್ಕೃತಿ ಬೆಳೆಯಲು ಸಾಧ್ಯವಾಯಿತು. ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದದ್ದು ಇತಿಹಾಸ.

ಮೈಸೂರು ಚಾಮುಂಡಿಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳಿಂದ  ಹಾಗೂ ದೊಡ್ಡ ದೊಡ್ಡ  ರಸ್ತೆಗಳಿಂದ ಕೂಡಿದ ಸುಂದರ ನಗರವಾಗಿದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲಿ ಇಲ್ಲವಾದರೂ ಉತ್ತಮ ವ್ಯಾಪಾರ ಕೇಂದ್ರವಾಗಿದೆ. ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾಲೇಜುಗಳು ಇಲ್ಲಿವೆ. ಸಮುದ್ರಮಟ್ಟದಿಂದ ಸುಮಾರು 2525ಅಡಿ ಎತ್ತರದಲ್ಲಿದ್ದು, ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ.

ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು  ಪ್ರವಾಸಿ ತಾಣಗಳಾಗಿವೆ.  ಮೈಸೂರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ದೂರದಿಂದ ಬರುವ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ ಎಲ್ಲವೂ ಮೈಸೂರಿನ ವಿಶೇಷತೆಗೆ ಸಾಕ್ಷಿಯಾಗಿವೆ. ಹೀಗಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಗಮನಸಸೆಳೆಯುತ್ತಿದ್ದು ಪ್ರವಾಸಿಗರು ಇತ್ತ ಸದಾ ಸುಳಿಯುತ್ತಿರುತ್ತಾರೆ.  ಈಗ ದಸರಾ ಸಮಯವಾಗಿರುವುದರಿಂದ ಇಡೀ ಮೈಸೂರು ನಗರ ದಸರಾಗೆ ಸಿದ್ಧಗೊಳ್ಳುತ್ತಿದ್ದು, ದೇವನಗರಿಯಂತೆ ಅಲಂಕಾರಗೊಳ್ಳುತ್ತಿದೆ.

Sneha Gowda

Recent Posts

ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ : ಓರ್ವ ಸಾವು, 13 ಮಂದಿ ಗಾಯ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಯುನಿವರ್ಸಿಟಿ ಸಮೀಪ ಬೆಳಗ್ಗೆ ಡಿಸೇಲ್‌ ಖಾಲಿಯಾಗಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹಿಡೆದ ಪರಿಣಾಮ ಓರ್ವ…

19 mins ago

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶುಂಠಿ ಕೊಪ್ಪದ ಕೀರ್ತನ ಪಿ. ಎಸ್ ರವರಿಗೆ 593 ಅಂಕ

2023 ಹಾಗೂ 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗಿನ ಶುಂಠಿ ಕೊಪ್ಪ ನಿವಾಸಿ…

27 mins ago

ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು

ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಂಗ್ರಪಾಡಿಯ ಸಾಯಿಬಾಬ…

37 mins ago

ಪುರುಷರಕಟ್ಟೆಯಲ್ಲಿ ಬಸ್- ಬೈಕ್ ಢಿಕ್ಕಿ: ಸವಾರ ಮೋಕ್ಷಿತ್ ಮೃತ್ಯು

ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನರಿಮೊಗರು ಗ್ರಾಮದ…

50 mins ago

ಆಂಡ್ರಾಯ್ಡ್‌ ಮೋಬೈಲ್‌ ಅಪ್ಡೇಟ್‌ ಮಾಡುವಂತೆ ಕೇಂದ್ರ ಸರ್ಕಾರ ಎಚ್ಚರಿಕೆ

ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ತಾಂತ್ರಿಕ ಲೋಪಗಳು ಪತ್ತೆಯಾಗಿವೆ. ಹೀಗಾಗಿ, ದೇಶದ ಆಂಡ್ರಾಯ್ಡ್‌ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ…

51 mins ago

ಬಸ್‌,ಲಾರಿ ನಡುವೆ ಭೀಕರ ಅಪಘಾತ : ಹೊತ್ತಿ ಉರಿದ ವಾಹನ, 6 ಮಂದಿ ಸಾವು

ಬಸ್‌ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಸಜೀವ ದಹನಹೊಂದಿರುವ ಘಟನೆ ಘಟನೆ…

1 hour ago