News Karnataka Kannada
Monday, April 15 2024
Cricket
ಮೈಸೂರು

ಮೈಸೂರಿನಲ್ಲಿ ದೊರೆತ ಮಾದಕ ದ್ರವ್ಯಗಳ ನಾಶ

ನಗರದ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಮಾದಕ ದ್ರವ್ಯಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೆ ಅನುಮತಿಯಾಗಿದ್ದ ಒಟ್ಟು 38 ಪ್ರಕರಣಗಳಲ್ಲಿ 134ಕೆ.ಜಿ 291 ಗ್ರಾಂ ಗಾಂಜಾ, 228ಗ್ರಾಂ ಎಂಡಿಎಂಎ ಹಾಗೂ 28 ಮಿಲಿ ಗ್ರಾಂ ಮೆಥಾಂಫೆಟಮೈನ್ ಮಾದಕ ದ್ರವ್ಯಗಳನ್ನು ನಿಯಮಾನುಸಾರ ಡ್ರಗ್ ಡಿಸ್ಪೋಸಲ್ ಕಮಿಟಿಯ ಮುಖಾಂತರ ನಾಶಪಡಿಸಲಾಗಿದೆ.
Photo Credit : By Author

ಮೈಸೂರು: ನಗರದ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಮಾದಕ ದ್ರವ್ಯಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೆ ಅನುಮತಿಯಾಗಿದ್ದ ಒಟ್ಟು 38 ಪ್ರಕರಣಗಳಲ್ಲಿ 134ಕೆ.ಜಿ 291 ಗ್ರಾಂ ಗಾಂಜಾ, 228ಗ್ರಾಂ ಎಂಡಿಎಂಎ ಹಾಗೂ 28 ಮಿಲಿ ಗ್ರಾಂ ಮೆಥಾಂಫೆಟಮೈನ್ ಮಾದಕ ದ್ರವ್ಯಗಳನ್ನು ನಿಯಮಾನುಸಾರ ಡ್ರಗ್ ಡಿಸ್ಪೋಸಲ್ ಕಮಿಟಿಯ ಮುಖಾಂತರ ನಾಶಪಡಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿರುವ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮದಲ್ಲಿ ಮೈಸೂರು ನಗರದಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳು ಮತ್ತು ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಸಿಸಿಬಿ ಘಟಕದ ಎಸಿಪಿ ಎಸ್.ಎನ್. ಸಂದೇಶ್ ಕುಮಾರ್, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು