Categories: ಮೈಸೂರು

ಮಳೆ ಗಾಳಿಗೆ ತೆಂಗು, ಬಾಳೆ ನಾಶ: ರೈತ ಕಂಗಾಲು

ಮೈಸೂರು: ಬಿರುಗಾಳಿ ಸಹಿತ ಬಿದ್ದ ಮಳೆಯ ರಭಸಕ್ಕೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟ ಹಾಗೂ ತೆಂಗಿನ ಮರಗಳು ನಾಶವಾಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಹಂಚಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿಪುರ ಗ್ರಾಮದಲ್ಲಿ ನಡೆದಿದೆ.

ಹಂಚಿಪುರ ಗ್ರಾಮದ ನಂದೀಶ್ ಅವರಿಗೆ ಸೇರಿದ 4 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಹಾಗೂ ತೆಂಗಿನ ಮರ ಬೆಳೆದಿದ್ದರು. ಬಾಳೆ ಫಸಲಿಗೆ ಬರುವ ಹಂತದಲ್ಲಿದ್ದರೆ, ತೆಂಗಿನ ಮರಗಳು ಫಸಲು ಬಿಡುತ್ತಿದ್ದವು. ಇದನ್ನೇ ನಂಬಿ ರೈತ ನಂದೀಶ್ ಜೀವನ ಸಾಗಿಸುತ್ತಿದ್ದರು. ಇದೀಗ ಗಾಳಿ ಮತ್ತು ಮಳೆಯಿಂದಾಗಿ ತೆಂಗಿನ ಮರಗಳು ನೆಲಕ್ಕುರುಳಿದ್ದು, ಬಾಳೆಗಳು ಮುರಿದು ಬಿದ್ದಿವೆ, ಇದರಿಂದಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಬೆಳೆ ನಾಶವಾಗಿದೆ.

ಇದೀಗ ಬಿರುಗಾಳಿಯಿಂದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ನೆಲಕ್ಕುರುಳಿ ನಷ್ಟ ಅನುಭವಿಸಿ ಕಂಗಾಲಾಗಿರುವ ನಂದೀಶ್ ಸಾಲ ಮಾಡಿ ಬೆಳದಿದ್ದ ಬೆಳೆಯು ಕೈಗೆ ಸೇರುವ ಹೊತ್ತಿನಲ್ಲಿ ನಾಶವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.

 

Sneha Gowda

Recent Posts

ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ?: ಪ್ರಿಯಾಂಕಾ ಗಾಂಧಿ ವಾದ್ರಾ

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿ…

4 mins ago

ಮತದಾನ ಜಾಗೃತಿಗಾಗಿ: ಪಂಜಿನ ಮೆರವಣಿಗೆ ಜಾಥಾಗೆ ಚಾಲನೆ

ಮೇ 07 ರಂದು ನಡೆಯವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾನ ಮಾಡಿ ಜಿಲ್ಲೆಗೆ ಮಾದರಿಯಾಗಬೇಕು ಎಂದು…

27 mins ago

ಮಹಾದೇವ್ ಬೆಟ್ಟಿಂಗ್ ಆಪ್ ಅವ್ಯವಹಾರ: ನಟ ಸಾಹಿಲ್ ಖಾನ್ ಬಂಧನ

ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಾಹಿಲ್ ಖಾನ್ ಬಂಧನಕ್ಕೊಳಗಾಗಿದ್ದರೆ. ಈ ನಟನನ್ನು ಬಂಧಿಸಿರುವುದಾಗಿ ಪೊಲೀಸರು…

49 mins ago

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ…

56 mins ago

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು !

ರಸ್ತೆ ಬದಿಯ ಚಿಕನ್ ಶವರ್ಮಾ ಸೇವಿಸಿ ಕನಿಷ್ಠ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಗೊರೆಗಾಂವ್…

1 hour ago