News Karnataka Kannada
Friday, April 12 2024
Cricket
ಮೈಸೂರು

ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ: ಮೈಸೂರಿನಲ್ಲಿ ಸಂಭ್ರಮೋತ್ಸವ

ದೇಶದ ಹಿರಿಯ ರಾಜಕೀಯ ಮುತ್ಸದ್ದಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತರತ್ನ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮೈಸೂರಿನ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಅಗ್ರಹಾರದ ನೂರೊಂದು ಗಣಪತಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ, ಅಡ್ವಾಣಿ ಪರ ಘೋಷಣೆ ಕೂಗಿ ಸಂಭ್ರಮಿಸಲಾಯಿತು.
Photo Credit : By Author

ಮೈಸೂರು: ದೇಶದ ಹಿರಿಯ ರಾಜಕೀಯ ಮುತ್ಸದ್ದಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತರತ್ನ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮೈಸೂರಿನ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಅಗ್ರಹಾರದ ನೂರೊಂದು ಗಣಪತಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ, ಅಡ್ವಾಣಿ ಪರ ಘೋಷಣೆ ಕೂಗಿ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರಾಕೇಶ್ ಭಟ್ ಅವರು “ಬ್ರಿಟಿಷ್ ಹಾಗೂ ಮೊಘಲರ ಆಡಳಿತದಲ್ಲಿ ನಲುಗಿದ್ದ ಭಾರತ ಸ್ವಾತಂತ್ರ್ಯದ ನಂತರ ತನ್ನ ಮೂಲ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳಲು ತವಕಿಸುತ್ತಿತ್ತು. ಅಂತಹ ಸಂದರ್ಭದಲ್ಲಿ ಜನರ ಭಾವನೆಗೆ ಬೆಲೆಕೊಟ್ಟು ಹೋರಾಟಕ್ಕಿಳಿದು ದೇಶಾದ್ಯಂತ ರಥಯಾತ್ರೆ ನಡೆಸಿದಂತವರು ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು. ಅವರ ನೇತೃತ್ವದ ಸಾವಿರಾರು ಜನರ ಹೋರಾಟದ ಫಲವಾಗಿ ಇಂದು ಅಯೋಧ್ಯೆಯ ರಾಮಾಜನ್ಮಭೂಮಿ ಹೋರಾಟ ತಾರ್ಕಿಕವಾಗಿ ಸುಖಾಂತ್ಯ ಕಂಡಿದೆ. ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಭಾರತರತ್ನ ನೀಡಿರುವುದು ಮಾಡಿರುವುದು ನಿಜಕ್ಕೂ ಸಮಸ್ತ ಭಾರತೀಯರಿಗೆ ಸಂತಸ ತಂದಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ನಗರಪಾಲಿಕ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಕೆ ಜೆ ರಮೇಶ್, ಅಪೂರ್ವ ಸುರೇಶ್, ಅಗಸ್ತ್ಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಬಿಜೆಪಿ ಮುಖಂಡರಾದ ರಾಕೇಶ್ ಭಟ್, ಕಡಕೋಳ ಜಗದೀಶ್, ಅಜಯ್ ಶಾಸ್ತ್ರಿ, ಸುಚೇಂದ್ರ, ಹೊಯ್ಸಳ ಕರ್ನಾಟಕ ನಿರ್ದೇಶಕರಾದ ರಂಗನಾಥ್, ವಿಜಯ್ ಕುಮಾರ್, ಚಕ್ರಪಾಣಿ, ಆನಂದ್ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು